Latest

ಮತ್ತೆ ಬಂದ್ ಆಗಲಿದೆ ಕರ್ನಾಟಕ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ವಿರೋಧಿ ನೀತಿ ಖಂಡಿಸಿ ರೈತರು ಮತ್ತೆ ಹೋರಾಟದ ಹಾದಿ ಹಿಡಿದಿದ್ದು, ಡಿಸೆಂಬರ್ 8ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ರೈತರು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಭಾರತ್ ಬಂದ್ ಗೆ ಬೆಂಬಲಿಸಿ ಡಿಸೆಂಬರ್ 8ರಂದು ರಾಜ್ಯದ ರೈತರಿಂದ ಕರ್ನಾಟಕ ಬಂದ್ ನಡೆಸಲಾಗುತ್ತದೆ. ಆದರೆ ನಮ್ಮದು ಹಿಂಸಾತ್ಮಕ ಬಂದ್ ಅಲ್ಲ, ಶಾಂತಿಯುತ ಬಂದ್. ರೈತರ ರಾಜ್ಯ ಬಂದ್ ಹತ್ತಿಕ್ಕಲು ಸಿಎಂ ಯಡಿಯೂರಪ್ಪ ಯತ್ನಿಸಬಾರದು ಎಂದು ಹೇಳಿದರು.

Home add -Advt

ಡಿಸೆಂಬರ್ 8ರಂದು ರಾಜ್ಯದ ಹೆದ್ದಾರಿಗಳು, ಜಿಲ್ಲಾ ಕೇಂದ್ರಗಳಲ್ಲಿ ರೈತರಿಂದ ಬಂದ್ ಆಚರಿಸಲಾಗುತ್ತದೆ. ಡಿಸೆಂಬರ್ 9ರಂದು ರೈತರಿಂದ ಬಾರುಕೋಲು ಚಳುವಳಿ ನಡೆಸುತ್ತೇವೆ ಎಂದಿದ್ದಾರೆ.

Related Articles

Back to top button