
ಪ್ರಗತಿ ವಾಹಿನಿ ಸುದ್ದಿ, ದುಬೈ:
ಇತ್ತೀಚೆಗೆ ದುಬೈನಲ್ಲಿ ನಡೆದ ಫಿಲಂ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಕಿಸ್ತಾನಿ ನಟ ಫಹಾದ್ ಮುಸ್ತಫಾ ಅವರು ಬಾಲಿವುಡ್‍ನ ಖ್ಯಾತ ನಟ ಗೋವಿಂದಾ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಏಷ್ಯಾ ರಾಷ್ಟ್ರಗಳ ಫಿಲಂ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ದುಬೈದಲ್ಲಿ ಆಯೋಜನೆಗೊಂಡಿತ್ತು. ಈ ವೇಳೆ ಗೋವಿಂದಾ ಕುಳಿತಲ್ಲಿಗೆ ಬಂದ ಫಹಾದ್ ಮುಸ್ತಫಾ, ಏಕಾಏಕಿ ಗೋವಿಂದಾ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ತಾನು ನಟನೆ ಶುರು ಮಾಡಿದ್ದೇ ಗೋವಿಂದಾ ಅವರ ನಟನೆ ನೋಡಿ ಎಂದು ಫಹಾದ್ ಮುಸ್ತಫಾ ಹೇಳಿದ್ದಾರೆ.
ಗೋವಿಂದಾ ಉದ್ದೇಶಿಸಿ ಮಾತನಾಡಿದ ಫಹಾದ್, ಸರ್ ನಾವು ಪಾಕಿಸ್ತಾನದಲ್ಲಿ ಒಂದು ಸಮಯ ನಟನೆ ಮಾಡುವುದಿದ್ದರೆ ನಿಮ್ಮ ತರಹವೇ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೆವು ಎಂದು ಹೇಳಿದ್ದಾರೆ. ಈ ವೇಳೆ ಗೋವಿಂದಾ ಮತ್ತು ನಟ ರಣಬೀರ್ ಸಿಂಗ್ ಕೂಡ ಫಹಾದ್ ಅವರನ್ನು ಆಲಂಗಿಸಿ ಅಭಿನಂದಿಸಿದ್ದಾರೆ.
https://pragati.taskdun.com/21-year-old-daughter-killed-by-her-father/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ