Latest

ವ್ಯಾನ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ

ಪ್ರಗತಿವಾಹಿನಿ ಸುದ್ದಿ; ತುಮಕೂರು: ಹೆರಿಗೆಗೆಂದು ತಾಲೂಕು ಆಸ್ಪತ್ರೆಗೆ ಬಂದ ಮಹಿಳೆ ವೈದ್ಯರ ನಿರ್ಲಕ್ಷಕ್ಕೆ ವಾಹನದಲ್ಲಿಯೇ ಹೆರಿಗೆಯಾದ ಘಟನೆ ತುಮಕೂರಿನಲ್ಲಿ ನಡೆದಿದೆ.

ಹೆರಿಗೆ ನೋವಿನಿಂದ ಬಳಲುತ್ತಿದ್ದ ಪಿಲ್ಲಕುಂಟೆ ಗ್ರಾಮದ ಲಕ್ಷ್ಮಿ ದೇವಿ ಎಂಬ ಮಹಿಳೆ ತುಮಕೂರು ಜಿಲ್ಲೆ ಪಾವಗಡ ತಾಲೂಕು ಆಸ್ಪತ್ರೆಗೆ ಹೆರಿಗೆಗೆ ಬಂದಿದ್ದಾರೆ. ಆದರೆ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ನಿರ್ಲಕ್ಷ ತೋರಿದ್ದಾರೆ. ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಳ್ಳದೇ ವಿಳಂಬ ಮಾಡಿದ್ದಾರೆ.

Home add -Advt

ಹೆರಿಗೆ ನೋವು ಹೆಚ್ಚಿದ ಹಿನ್ನೆಲೆಯಲ್ಲಿ ಮಹಿಳೆ ತಾನು ಬಂದ ವ್ಯಾನ್ ನಲ್ಲಿಯೇ ಮಗುವುಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿಗೆ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಷತ್ ಸಭಾಪತಿ ಹೊರಟ್ಟಿ ವಿರುದ್ಧ FIR; ಇನ್ಸ್ ಪೆಕ್ಟರ್ ಸಸ್ಪೆಂಡ್

Related Articles

Back to top button