ಪಾರ್ಲಿಮೆಂಟ್ ರಚನೆ ಸಮಾರಂಭ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಅಮೃತಾ ವಿಧ್ಯಾಲಯ ಶಾಲೆಯಲ್ಲಿನ ಶಿಸ್ತು ಮತ್ತು ಸಂಯಮತೆಯಲ್ಲಿ ಹಿಡಿತದಲ್ಲಿ ಇಟ್ಟುಕೊಳ್ಳುವ ಶಾಲೆಯಲ್ಲಿ ಸಂಪುಟ ರಚನೆಯನ್ನು ಮಾಡಲಾಗುತ್ತದೆ. ಹಾಗೂ ಶಾಲೆಯಲ್ಲಿನ ವಿವಿಧ ಚಟುವಟಿಕೆಗಳು ನಿರಾಳವಾಗಿ ನಡೆಯುವುದು ಇನ್ನೊಂದು ಉದ್ದೇಶ. ಶಾಲೆಯ ಸಂಪುಟ ರಚನೆಯಲ್ಲಿ ಮಂತ್ರಿಗಳೊಂದಿಗೆ ವಿವಿದ ಉಪ ಮಂತ್ರಿಗಳನ್ನು ಸೇರಿಸಲಾಗುತ್ತದೆ.
ಇಂತಹ ಶಾಲೆಯ ಸಂಪುಟ ರಚನೆಯು ಬೆಳಗಾವಿಯ ಅಮೃತಾ ವಿಧ್ಯಾಲಯದಲ್ಲಿ ದಿ. 19ನೇ ಅಗಸ್ಟ ರಂದು ಆಚರಿಸಲಾಯಿತು. ಶಾಲೆಯಲ್ಲಿನ 9 ಮತ್ತು 10 ನೇ ತರಗತಿಯ ಮಕ್ಕಳನ್ನು ಈ ಜವಾಬ್ದಾರಿಯುತ ಕೆಲಸಗಳನ್ನು ಮುಂದುವರೆಸಿ ಕೊಳ್ಳುವುದಾಗಿ ನೇಮಕ ಮಾಡಲಾಗಿತ್ತು. ಈ ಸಮಾರಂಭವು 2019-20 ರ ವಾರ್ಷಿಕ ಅವಧಿಯದಾಗಿತ್ತು. ಆಯ್ಕೆಯಾದ ವಿಧ್ಯಾರ್ಥಿ ಮಂತ್ರಿಗಳು ಹುರುಪಿನಿಂದ ಪ್ರಮಾಣವಚನ ಸ್ವೀಕರಿಸಿ ತಾವು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿವುದಾಗಿ ಪ್ರಮಾಣ ಮಾಡಿದರು.
ಈ ಸಮಾರಂಭದ ಮುಖ್ಯ ಅತಿಥಿ ಶ್ರೀ ರಘುವಂಶ ಉಪಾಧ್ಯಾಯ (ಡಿ.ಎಸ್.ಪಿ. ಇನ್. ಸಿ.ಅರ್.ಎಫ್) ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಅವರು ತಮ್ಮ ಭಾಷಣದಲ್ಲಿ ಮಕ್ಕಳ್ಳಿಗೆ ಭವಿಷ್ಯದ ನಾಯಕರಾಗಿ ದೇಶದ ಸೇವೆಗೆ ಹಾಗೂ ಸುತ್ತಮುತ್ತಲಿನ ಸಮಾಜಕ್ಕೆ ಸಹಾಯ ಮಾಡುವಂತೆ ವಿನಂತಿಸಿದರು. ಶಾಲೆಯ ಮಕ್ಕಳ್ಳಲ್ಲಿನ ಶಿಸ್ತುಪಾಲನೆ ಮತ್ತು ನೈತಿಕತೆಯಬಗ್ಗೆ ಪ್ರಸ್ತಾಪಿಸಿದರು.
ಮಕ್ಕಳಿಗೆ ದೇಶ ಸೇವೆಯೆ ಈಶ ಸೇವೆ ಎಂದು ತಿಳಿಸಿ ಹೇಳಿದರು. ಮಕ್ಕಳ್ಳು ದೇಶ ಸೇವೇಗೆ ತಮ್ಮನ್ನು ಮೂಡುಪಾಗಿಟ್ಟುಕೊಳ್ಳುವಂತೆ ಹೇಳಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಷ್ಮಾ ಸಿ. ಚರಂತಿಮಠ ಅವರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದಕ್ಕಾಗಿ ಅಭಿನಂದಿಸಿದರು.
ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಷ್ಮಾ ಸಿ. ಚರಂತಿಮಠ ಅತಿಥಿಗಳೊಂದಿಗೆ ದೀಪ ಪ್ರಜ್ವಲನೆ ಮಾಡಿದರು. ಮತ್ತು ಸಂಪುಟ ರಚನೆಯನ್ನು ಘೋಷಿಸಿದರು. ಈ ಸಮಾರಂಭವು ಅತ್ಯಂತ ಸುಂದರವಾಗಿ ಮುಕ್ತಾಯವಾಯಿತು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ