ಪ್ರಗತಿವಾಹಿನಿ ಸುದ್ದಿ: ಇ-ಖಾತೆ ಮಾಡಿಕೊಡಲು ಲಂಚಕ್ಕೆ ಕೈಯೊಡ್ಡಿದ್ದ ಪಿಡಿಒ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಇಂಡುವಳ್ಳಿಯಲ್ಲಿ ನಡೆದಿದೆ.
ಇಂಡುವಳ್ಳಿಯ ಪ್ರಭಾರ ಪಿಡಿಒ ಈಶ್ವರಪ್ಪ ಲೋಕಾಯುಕ್ತ ಬಲೆಗೆ ಬಿದ್ದವರು. ಮೊಹಮ್ಮದ್ ಗೌಸ್ ಎಂಬುವವರು ಇಂಡುವಳ್ಳಿಯಲ್ಲಿನ ತಮ್ಮ ಜಮೀನಿನ ಮೇಲೆ ಬ್ಯಾಂಕ್ ನಿಂದ ಸಾಲ ಪಡೆಯಲು ಇ-ಖಾತೆ ಮಾಡಿಸಿಕೊಡುವಂತೆ ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ್ದರು. ಪ್ರಭಾರ ಪಿಡಿಒ ಈಶ್ವರಪ್ಪ 5 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಹಲವು ಬಾರಿ ಇ-ಖಾತೆ ಬಗ್ಗೆ ಕೇಳಿದರೂ ಮಾಡಿಕೊಡದೇ ಸತಾಯಿಸುತ್ತಾ, 5 ಸಾವಿರ ಲಂಚ ನೀಡುವಂತೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಮೊಹಮ್ಮದ್ ಗೌಸ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಇಂದು ಸೊರಬ ಪಟ್ಟಣದ ಪೋಸ್ಟ್ ಆಫೀಸ್ ಬಳಿ ಪಿಡಿಒ ಈಶ್ವರಪ್ಪ, ಮೊಹಮ್ಮದ್ ಗೌಸ್ ಕಡೆಯಿಂದ ಲಂಚ ಪಡೆಯುತ್ತಿದ್ದಾಗಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇಶ್ವರಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ