ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಪೆಟ್ರೋಲ್-ಡೀಸೆಲ್ ದರ ಕೂಡ ಏರಿಕೆಯಾಗುತ್ತಿದ್ದು, ಇಂದು ಪ್ರತಿ ಲೀಟರ್ ಪೆಟ್ರೋಲ್ 22-24 ಪೈಸೆ ಹಾಗೂ ಡೀಸೆಲ್ 27-29 ಪೈಸೆ ಏರಿಕೆಯಾಗಿದೆ.
ರಾಜಧಾನಿ ಬೇಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 95.33 ರೂಪಾಯಿ ಹಾಗೂ ಡೀಸೆಲ್ ದರ 87.92 ರೂಪಾಯಿ ಹೆಚ್ಚಳವಾಗಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 92.58ರೂ ಹಾಗೂ ಡೀಸೆಲ್ ದರ 83.22 ರೂಪಾಯಿ ಆಗಿದೆ.
ಮುಂಬೈನಲ್ಲಿ ಪೆಟ್ರೋಲ್-ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಏರಿಕೆ ಕಂಡಿದ್ದು, ಒಂದು ಲೀಟರ್ ಪೆಟ್ರೋಲ್ ದರ 98.88 ರೂಪಾಯಿ ಹಾಗೂ ಡೀಸೆಲ್ ದರ 90.40 ರೂ ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 92.67 ರೂ ಇದ್ದರೆ ಡೀಸೆಲ್ ದರ 86.06 ರೂ ಏರಿಕೆ ಕಂಡಿದೆ.
ಮತ್ತೆ ಎಂಇಎಸ್ ಪುಂಡಾಟ; ಬೀಮ್ಸ್ ಆಸ್ಪತ್ರೆಗೆ ನುಗ್ಗಿ ದಾಂಧಲೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ