
ಪ್ರಗತಿವಾಹಿನಿ ಸುದ್ದಿ: ಜಾರ್ಖಂಡ್ ನ ಡಿಯೋಘರ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 18 ಜನ ಕನ್ವರ್ ಯಾತ್ರಿಕರು ಸಾವನ್ನಪ್ಪಿದ್ದಾರೆ.
ಕನ್ವರ್ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ಒಂದು ಅಪಘಾತಕ್ಕೀಡಾದ ಪರಿಣಾಮ 18 ಮಂದಿ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ 20 ಕ್ಕೂ ಹೆಚ್ಚು ಮಂದಿಗೆ ಗಂಭೀರವಾಗಿ ಗಾಯವಾಗಿದೆ.
ಜಮುನಿಯಾ ಕಾಡಿನ ಬಳಿರುವ ಮೋಹನ್ ಪುರ ಗ್ರಾಮದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ 4.30 ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.
ಬಸ್ ತುಂಬ ಕನ್ವರ್ ಯತ್ರಾರ್ಥಿಗಳೇ ಇದ್ದು ಅವರೆಲ್ಲರೂ ತಮ್ಮ ಅಡುಗೆಗಾಗಿ ಗ್ಯಾಸ್ ಸಿಲಿಂಡರ್ ಸಹ ಕೊಂಡೊಯ್ಯುತ್ತಿದ್ದರು. ಅಪಘಾತದ ಬಳಿಕ ಸಿಲಿಂಡರ್ ಸ್ಫೋಟಗೊಂಡಿರುವುದು ದುರ್ಘಟನೆಯ ತೀವ್ರತೆಯನ್ನು ಹೆಚ್ಚಿಸಿದೆ.
ಎಲ್ಲರೂ ಬೋಲೆ ಬಂ ಬೋಲೆನಾಥ್ ಎಂದು ಘೋಷಣೆ ಕೂಗುತ್ತಾ ಬಾಬಾ ಬೈದ್ಯನಾಥ್ ಧಾಮ್ ನಿಂದ ಆಗತಾನೇ ಹೊರಟಿದ್ದರು ಎಂದು ಬದುಕುಳಿದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.