Kannada NewsKarnataka NewsLatest
ಚಪ್ಪಾಳೆ ಸಾಕು, ಸೌಲಭ್ಯ ಕೊಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ರೋಗಿಗಳ ಸೇವೆಯಲ್ಲಿ ನಿರತರಾಗಿರುವ ನರ್ಸ್ ಗಳಿಗೆ ಸೌಲಭ್ಯ ಕೊಡುವಂತೆ ಪ್ರತಿಭಟನೆ ನಡೆಸಿದ್ದಾರೆ.
ಚಪ್ಪಾಳೆ ತಟ್ಟಿದ್ದು ಸಾಕು, ನಮಗೆ ಸರಿಯಾಗಿ ವೇತನ ಕೊಡಿ. ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿ ಮಾಡಿ ಎಂದು ಆಗ್ರಹಿಸಿದರು. ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕೊರೋನಾ ವಾರ್ಯಿರ್ಸ್ ಗಳಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.





