Kannada NewsKarnataka NewsLatest
*ಕಾನ್ಸ್ ಟೆಬಲ್ ಗೆ ಬೆಂಕಿ ಹಚ್ಚಿದ ಪ್ರಕರಣ; ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರಿಯತಮ ಪೊಲೀಸ್ ಕಾನ್ಸ್ ಟೇಬಲ್ ಗೆ ಪ್ರಿಯತಮೆಯೇ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಾಣಿ ಬಂಧಿತ ಆರೋಪಿ. ವಿಚಾರಣೆ ವೇಳೆ ತಾನು ಕಾನ್ಸ್ ಟೇಬಲ್ ಸಂಜಯ್ ಗೆ ಬೆಂಕಿ ಹಚ್ಚಿಲ್ಲ ಎಂದು ಆರೋಪಿ ರಾಣಿ ತಿಳಿಸಿದ್ದಾಳೆ. ಸಂಜಯ್ ಹಾಗೂ ನನಗೂ ಜಗಳವಾಗಿದೆ. ಈ ವೇಳೆ ಸಂಜಯ್ ನನ್ನನ್ನು ಸಾಯಿಸುತ್ತೇನೆ ಎಂದು ಹೇಳಿ ಬೆದರಿಕೆ ಹಾಕಿದ್ದ. ಆತನೇ ಹೋಗಿ ಒಂದು ಬಾಟಲ್ ನಲ್ಲಿ ಪೆಟ್ರೋಲ್ ತಂದು ಮೈಮೇಲೆ ಸುರಿದುಕೊಂದು ಬೆಂಕಿ ಕಡ್ಡಿ ಗೀರಿ ಹೆದರಿಸುತ್ತಿದ್ದ. ಈ ವೇಳೆ ಬೆಂಕಿ ಆಕಸ್ಮಿಕವಾಗಿ ಆತನಿಗೆ ತಗುಲಿದೆ ಎಂದು ಹೇಳಿದ್ದಾಳೆ.
ಎಫ್ ಎಸ್ ಎಲ್ ನಿಂದ ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಬೇಕಿದೆ.




