ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶ್ರೀರಾಮ ಸೇನಾ ಮುಖಂಡ ರವಿ ಕೋಕಿತ್ಕರ್ ಅವರ ಮೇಲೆ ಇತ್ತೀಚೆಗೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಿರ್ಲಕ್ಷ್ಯ ತೋರಿದ್ದು, ಪ್ರಕರಣದ ವಿಚಾರಣೆ ಸರಿಯಾಗಿಲ್ಲ ಎಂದು ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಗಂಭೀರ ಪ್ರಕರಣವಾಗಿದೆ. ಸ್ವಲ್ಪ ಅಚಾತುರ್ಯವಾಗಿದ್ದರೂ ಒಂದು ಜೀವ ಬಲಿಯಾಗಿ ರಾಜ್ಯದಲ್ಲಿ ಗಲಭೆಯಾಗುತ್ತಿತ್ತು. ಜೊತೆಗೆ ಒಂದು ಕುಟುಂಬ ಬೀದಿಗೆ ಬರಲಿತ್ತು ಎಂದರು.
ಇದು ಹಣ, ವೈಯಕ್ತಿಕ ದ್ವೇಷಕ್ಕೆ ಸಂಬಂಧಿಸಿ ಘಟನೆ ನಡೆದಿದೆ ಎಂದು ಪೊಲೀಸ್ ಆಯುಕ್ತರು ಹೇಳಿರುವುದು ತಪ್ಪು. ಇದರ ಹಿಂದೆ ಸಾಕಷ್ಟು ಕೈಗಳು ಕೆಲಸ ಮಾಡಿವೆ. ಇದೊಂದು ವ್ಯವಸ್ಥಿತ ರಾಜಕೀಯ ಪ್ರೇರಿತ ಕೊಲೆ ಪ್ರಯತ್ನ.ಈ ರಾಜಕೀಯ ಪ್ರಭಾವದಿಂದ ಪೊಲೀಸ್ ಇಲಾಖೆ ಆಸೆ, ಒತ್ತಡಕ್ಕೆ ಮಣಿಯುತ್ತಿದೆ ಎಂದು ನೇರ ಆರೋಪಿಸಿದರು.
ಪೊಲೀಸರು ಆ ಕಾರಿನಲ್ಲಿದ್ದ ಮೂವರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ಈವರೆಗೆ ಪಡೆದಿಲ್ಲ. ಸ್ಥಳದ ಅಕ್ಕಪಕ್ಕದ ಮನೆಗಳು ಅಂಗಡಿ, ಗ್ಯಾರೇಜ್, ಹೋಟಲ್ ನವರ ಹೇಳಿಕೆ ಪಡೆದಿಲ್ಲ. ಸಿಸಿ ಕ್ಯಾಮರಾದಲ್ಲಿ ಒಂದು ಸ್ಕೂಟರ್, ಬೈಕ್ ಇವೆ. ಬೈಕ್ ವೇಗವಾಗಿ ಹೋಗಿದೆ. ಸ್ಕೂಟರ್ ಅಲ್ಲೇ ಎಡಗಡೆಯ ಶಾಲೆಯತ್ತ ಹೋಗಿದೆ. ಸ್ಕೂಟರ್ ಜಪ್ತಿ ಮಾಡಿದ್ದಾರೆ. ಆದರೆ ಬೈಕ್ ಜಪ್ತಿ ಮಾಡಿಲ್ಲ. ಬೈಕ್ ಇನ್ನೂ ಏಕೆ ಜಪ್ತಿ ಮಾಡಿಲ್ಲ? ಎಂದು ಪ್ರಶ್ನಿಸಿದರಲ್ಲದೆ ಇದೊಂದು ರಾಜಕೀಯ ಪ್ರೇರಿತ, ಹಿಂದೂ ವಿರೋಧಿ ಷಡ್ಯಂತ್ರ ಎಂದು ಆರೋಪಿಸಿದರು.
ಘಟನೆಗೆ ಸಂಬಂಧಿಸಿದಂತೆ ಮೂವರು ಶರಣಾಗತರಾಗಿದ್ದಾರೆ. ಆದರೆ ಪೊಲೀಸರ ಬಳಿ ಅಲ್ಲ, ಯಾವುದೋ ಅಧಿಕಾರಿ ಎದುರು ಹಾಜರಾಗಿದ್ದಾರೆ. ಪೊಲೀಸರು ತನಿಖೆ ಮಾಡೇ ಇಲ್ಲ, ಎರಡನೇ ಗುಂಡು ಕೋಕಿತ್ಕರ್ ಅವರ ಕಾರಿನಲ್ಲಿ ಸಿಕ್ಕಿದ್ದು ಪೊಲೀಸರು ಪತ್ತೆ ಮಾಡಿದ್ದಲ್ಲ.
ಪೊಲೀಸರು ಇನ್ನೂ ಕಲಂ 27ಎ ಪ್ರಕಾರ ಪ್ರಕರಣ ದಾಖಲಿಸಿರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುತಾಲಿಕ್ ಈ ಪ್ರಕರಣದಲ್ಲಿ ಜೀವಾವಧಿ, ಗಲ್ಲುಶಿಕ್ಷೆಗೂ ಅವಕಾಶವಿದೆ. ಆದರೆ ಪೊಲೀಸರೇಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.
ಈ ಪ್ರಕರಣದ ವಿಚಾರಣೆಯಲ್ಲಿ ಪೊಲೀಸರ ಬಗ್ಗೆ ತಮಗೆ ವಿಶ್ವಾಸವಿಲ್ಲ ಎಂದ ಅವರು, ಸಿಐಡಿ ಅಥವಾ ಎಸ್ ಐಟಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರವಿ ಕೋಕಿತ್ಕರ್ ಹಾಗೂ ವಕೀಲರು ಹಾಜರಿದ್ದರು.
*ಬೆಳಗಾವಿ: ಮತ್ತೋರ್ವ ವ್ಯಕ್ತಿಯ ಬರ್ಬರ ಹತ್ಯೆ*
https://pragati.taskdun.com/belagavinandagadaman-murde/
*ಪೊಲೀಸ್ ಠಾಣೆ ನಿಷೇಧಿತ ಪ್ರದೇಶವಲ್ಲ; ವಿಡಿಯೋ ರೆಕಾರ್ಡಿಂಗ್ ತಪ್ಪಲ್ಲ; ಹೈಕೋರ್ಟ್ ಅಭಿಪ್ರಾಯ*
https://pragati.taskdun.com/police-station-is-not-a-restricted-areavideo-recording-is-not-wrongbpmbay-high-court/
*ನೀರಾವರಿ ದಶಕ ಘೋಷಿಸಿದ ಸಿಎಂ ಬೊಮ್ಮಾಯಿ*
https://pragati.taskdun.com/cm-basavaraj-bomaiyadagiri-neeravari-dashaka/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ