Belagavi NewsBelgaum NewsKannada NewsKarnataka NewsLatest

ವಿವಿಧೆಡೆ ವಿದ್ಯುತ್ ವ್ಯತ್ಯಯ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹೆಸ್ಕಾಂ ಉಗಾರ ಉಪವಿಭಾಗದಲ್ಲಿ ಬರುವ ೧೧೦/೩೩/೧೧ ಕೆವ್ಹಿ ಉಗಾರ ಉಪ ಕೇಂದ್ರಲ್ಲಿ ತುರ್ತು ದುರಸ್ತಿ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಸದರಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ವಿವಿಧ ಗ್ರಾಮಗಳಲ್ಲಿ ಶನಿವಾರ (ಆ.೨೬) ೨೦೨೩ ರಂದು ಬೆಳ್ಳಿಗೆ ೯ ಗಂಟೆಯಿಂದ ಸಂಜೆ ೫ ಘಂಟೆಯ ವರೆಗೆ ವಿದ್ಯುತ್ ವ್ಯತ್ಯಯಾಗಲಿದೆ.
ಹೆಸ್ಕಾಂ ಉಗಾರ ಉಪವಿಭಾಗದ ಕಕ್ಷೆಯಲ್ಲಿರುವ ಗ್ರಾಮಗಳು ಶೇಡಬಾಳ, ಶೇಡಬಾಳ ಸ್ಟೇಷನ್, ಕಲ್ಲಾಳ, ಉಪ್ಪಾರವಾಡಿ, ದೊ೦ಡಿಮಡ್ಡಿ, ಮಂಗಳೊಳಿ, ಲೋಕುರ, ಉಗಾರ ಕೆ.ಎಚ್, ಫರಿದ್ ಖಾನವಾಡಿ, ವಿನಾಯಕವಾಡಿ, ಉಗಾರ ಬಿ.ಕೆ, ಪರಮೇಶ್ವರವಾಡಿ, ಕುಸನಾಳ, ಮತ್ತು ಮೋಳವಾಡ, ಹಾಗೂ ಎಲ್ಲಾ ನೀರಾವರಿ ಪಂಪಸೆಟ್‌ಗಳಿಗೆ ಸರಬರಾಜು ಆಗುವ ವಿದ್ಯುತ್ ಮಾರ್ಗಗಳ ವಿದ್ಯುತ್ ವ್ಯತ್ಯಯಾಗಲಿದೆ ಎಂದು ಹುವಿಸಕಂನಿ ಉಗಾರ ಕಾರ್ಯ ಮತ್ತು ಪಾಲನೆ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಡಗಾಂವ ಉಪಕೇಂದ್ರ


ಕ.ವಿ.ಪ್ರ.ನಿ.ನಿ. ವತಿಯಿಂದ ಆ.೨೭ ೨೦೨೩ ರಂದು ಬೆಳಿಗ್ಗೆ ೯.ಗಂಟೆ ಯಿಂದ ಮಧ್ಯಾಹ್ನ ೨ ಘಂಟೆಯವರೆಗೆ ಎರಡನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ವಡಗಾಂವ ಉಪಕೇಂದ್ರದಿಂದ ಸರಬರಾಜು ಆಗುವ ಧಾಮನೆ, ಕುರುಬರಹಟ್ಟಿ, ಮಾಸ್ಗ್ಯಾನಟ್ಟಿ, ದೇವಗ್ಯಾನಟ್ಟಿ, ಔಚಾರಟ್ಟಿ, ಯರಮಾಳ, ಯಳ್ಳೂರ, ಸುಳಗಾ, ರಾಜಹಂಸಗಡ, ದೇಸೂರ, ನಂದಿಹಳ್ಳಿ, ಕೊಂಡಸಕೊಪ್ಪ, ಹಲಗಾ, ಬಸ್ತವಾಡ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹುವಿಸಕಂನಿ ಕಾ ಮತ್ತು ಪಾ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button