ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಕಲ್ಲಿದ್ದಲು ಸಚಿವಾಲಯದಿಂದ ಮಲ್ಟಿ ಮೊಡೆಲ್ ಸಂಪರ್ಕವನ್ನು ಸುಸ್ಥಿರಗೊಳಿಸಲು 15 ರೈಲ್ವೆ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಇಂದು ಕಲ್ಲಿದ್ದಲು ಲಾಜಿಸ್ಟಿಕ್ಸ್ ನೀತಿ ಹಾಗೂ ಯೋಜನೆಗಳಿಗೆ ಚಾಲನೆ ನೀಡಿದ್ದಾಗಿ ಸಚಿವ ಜೋಶಿ ಟ್ವಿಟ್ ಮಾಡಿದ್ದಾರೆ.
ಸುಸ್ಥಿರ ಪ್ರಕ್ರಿಯೆಗಳೊಂದಿಗೆ ಕಲ್ಲಿದ್ದಲು ಉತ್ಪಾದನೆಯ ಬೆಳವಣಿಗೆಯನ್ನು ಸಮನ್ವಯಗೊಳಿಸಲು ಹಾಗೂ ಸರ್ಕಾರದ ಸಾಮರ್ಥ್ಯವನ್ನು ಪ್ರದರ್ಶಿಸುವ 5 ಯೋಜನೆಗಳನ್ನು ಈಗಾಗಲೇ ಅನುಷ್ಠಾನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.
ಭಾರತದ ಗಣಿಗಾರಿಕೆ ವಲಯದಲ್ಲಿ ಪ್ರಗತಿ ಸಾಧಿಸಲು ಮತ್ತು ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲು ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ಕಲ್ಲಿದ್ದಲು ಸ್ಥಳಾಂತರ ಪ್ರಕ್ರಿಯೆಗಳನ್ನು ಉತ್ತಮಗೊಳಿಸುವತ್ತ ತಮ್ಮ ಸಚಿವಾಲಯ ಗಮನ ಹರಿಸುತ್ತಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ಅಲ್ಲದೇ, ಕಲ್ಲಿದ್ದಲು ಕಂಪನಿಗಳು 1051 MT ಸಾಮರ್ಥ್ಯದ ಒಟ್ಟು 103 FMC ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಇದರ ಮೌಲ್ಯ 24000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಪೈಕಿ 291 ಮೆಟ್ರಿಕ್‌ಟನ್‌ನ 31 ಎಫ್‌ಎಂಸಿಗಳು ಇಲ್ಲಿಯವರೆಗೆ ಪೂರ್ಣಗೊಂಡಿವೆ ಎಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ