Belagavi NewsBelgaum NewsEducationKannada NewsKarnataka NewsLatest

*ಎಐ ಯುಗದಲ್ಲಿ ನಿಮ್ಮ ವೃತ್ತಿಯನ್ನು ರೂಪಿಸುವುದು ಹೇಗೆ? :ಅತಿಥಿ ಉಪನ್ಯಾಸ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಎಐ ಯುಗದಲ್ಲಿ ನಿಮ್ಮ ವೃತ್ತಿಯನ್ನು ರೂಪಿಸುವುದು ಹೇಗೆ ಎಂಬ ವಿಷಯದ ಕುರಿತು ಮೈಕ್ರೋಸಾಫ್ಟ್ ನ ಪರಿಣಿತ ಚೇತನ್ ಮುತಾಲಿಕ್ ದೇಸಾಯಿ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಸಂಸ್ಥೆ, ಬೆಳಗಾವಿಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗವು, ಎಐಟಿಎಂ ತರಬೇತಿ ಮತ್ತು ಉದ್ಯೋಗಾಕಾಂಕ್ಷಿ ಹಾಗೂ ಎಐಟಿಎಂ -ಎಸಿಎಂ ಅಧ್ಯಾಯದ ಸಹಯೋಗದಲ್ಲಿ,ಎಐ ಯುಗದಲ್ಲಿ ನಿಮ್ಮ ವೃತ್ತಿಯನ್ನು ರೂಪಿಸುವುದು ಹೇಗೆ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗಾಗಿ ಅತಿಥಿ ಉಪನ್ಯಾಸವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಮೈಕ್ರೋಸಾಫ್ಟ್ ಪ್ರಿನ್ಸಿಪಲ್ ಪ್ರೊಡಕ್ಟ್ ಮ್ಯಾನೇಜರ್ ಚೇತನ್ ಮುತಾಲಿಕ್ ದೇಸಾಯಿ ಆಗಮಿಸಿದ್ದರು. ಐಡೆಂಟಿಟಿ, ಸೆಕ್ಯೂರಿಟಿ ಹಾಗೂ ಎಂಟರ್‌ಪ್ರೈಸ್ ಸಾಫ್ಟ್‌ವೇರ್ ಕ್ಷೇತ್ರದಲ್ಲಿ, ಇಪ್ಪತ್ತು ವರ್ಷಕ್ಕೂ ಅಧಿಕ ಅನುಭವ ಹೊಂದಿರುವ, ಚೆತನ್ ಅವರು, ಉದ್ಯೋಗದಲ್ಲಿ ಸ್ಪರ್ಧಾತ್ಮಕತೆಯನ್ನು ಹೇಗೆ ಕಾಯ್ದುಕೊಳ್ಳುವುದು, ನಿತ್ಯಕಾಲಿಕ ಕಲಿಕೆಗೆ ಹೇಗೆ ಒತ್ತು ನೀಡಬೇಕು ಮತ್ತು ಸೌಲಭ್ಯ ವಲಯದಿಂದ ಹೊರಬಂದು, ನವೀನ ಅವಕಾಶಗಳನ್ನು ಅನ್ವೇಷಿಸುವುದರ ಅಗತ್ಯತೆಯ ಬಗ್ಗೆ ಉಪಯುಕ್ತವಾದ ಮಾಹಿತಿಯನ್ನೊದಗಿಸಿದರು.

ಕಾರ್ಯಕ್ರಮವು ನಾಡಗೀತೆ ಹಾಗೂ ದೀಪಪ್ರಜ್ವಲನೆಯೊಂದಿಗೆ ಆರಂಭವಾಯಿತು. ಮುಖ್ಯ ಅತಿಥಿ ಚೇತನ ಅವರಿಗೆ ಪ್ರಾಚಾರ್ಯ ಹಾಗೂ ನಿರ್ದೇಶಕರಾದ ಡಾ. ಆನಂದ ಬಿ. ದೇಶಪಾಂಡೆ ಅವರು ಸ್ಮರಣಿಕೆಯನ್ನು ನೀಡಿದರು.

Home add -Advt

ಡಾ. ಆನಂದ ಬಿ. ದೇಶಪಾಂಡೆ ಅವರು ತಮ್ಮ ಭಾಷಣದಲ್ಲಿ ಕೃತಕ ಬುದ್ಧಿಮತ್ತೆಯು (ಎಐ) ಎಲ್ಲ ಕ್ಷೇತ್ರಗಳಲ್ಲಿಯೂ ಹೇಗೆ ಬೆಳೆಯುತ್ತಿದೆ ಎಂಬುದರ ಬಗ್ಗೆ ವಿವರಿಸಿದರು ಮತ್ತು ವಿದ್ಯಾರ್ಥಿಗಳು ಹೊಸತನ, ಹೊಂದಿಕೊಳ್ಳುವಿಕೆ ಹಾಗೂ ನಿತ್ಯಕಾಲಿಕ ಕಲಿಕೆಯನ್ನು ಸ್ವೀಕರಿಸಬೇಕೆಂದು ಪ್ರೇರಣೆ ನೀಡಿದರು. ಇಂತಹ ಉಪನ್ಯಾಸಗಳು ಶೈಕ್ಷಣಿಕ ಜ್ಞಾನ ಹಾಗೂ ಕೈಗಾರಿಕಾ ಅಗತ್ಯತೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಡಾ. ಧನಶ್ರೀ ಕುಲಕರ್ಣಿ ಡೀನ್ ಅಕಾಡೆಮಿಕ್ಸ್, ಮುಖ್ಯಸ್ಥರು ಎಐಟಿಎಂ ವಿಭಾಗ ಮತ್ತು ಎಸಿಎಮ್ ಅಧ್ಯಾಯದ ಫ್ಯಾಕಲ್ಟಿ ಸಲಹೆಗಾರರು ಮತ್ತು ಪ್ರೊ. ವಿಶಾಲಕೀರ್ತಿ ಪಾಟೀಲ ತರಬೇತಿ ಮತ್ತು ಉದ್ಯೋಗ ಅಧಿಕಾರಿ, ಪ್ರೊ. ಗೌತಮ್ ದೇಮಟ್ಟಿ ಎಸಿಎಮ್ ಸಂಯೋಜಕರು, ಎಲ್ಲ ವಿಭಾಗದ ಡೀನ್‌ಗಳು, ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರ್ವಹಣೆಯನ್ನು ಸಹಾಯಕ ಪ್ರಾಧ್ಯಾಪಕಿ ಪ್ರೊ. ಪ್ರಿಯಾಂಕಾ ಪುಜಾರಿ ಅವರು ಮಾಡಿದರು.

ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯಗಳು ಮತ್ತು ವೃತ್ತಿ ಲಕ್ಷ್ಯಗಳನ್ನು ಎಐ ಯುಗದ ಉದಯೋನ್ಮುಖ ಅವಕಾಶಗಳೊಂದಿಗೆ ಹೊಂದಾಣಿಕೆಯಾಗಿಸುವ ಬಗ್ಗೆ ಅಮೂಲ್ಯ ಮಾರ್ಗದರ್ಶನ ನೀಡಿತು.

ಈ ಕಾರ್ಯಕ್ರಮದ ಯಶಸ್ಸಿಗೆ ಸದಾ ಸಹಕಾರ ನೀಡುತ್ತಿರುವ ಆಡಳಿತ ಮಂಡಳಿಯ ಡಾ. ಸ್ಪೂರ್ತಿ ಪಾಟೀಲ ನಿರ್ದೇಶಕರು, ಹಾಗೂ ನಿರ್ವಹಣಾಧಿಕಾರಿ ರಾಜು ಜೋಶಿ ಮತ್ತು ಪ್ರಾಚಾರ್ಯ ಹಾಗೂ ನಿರ್ದೇಶಕರಾದ ಡಾ. ಆನಂದ ಬಿ. ದೇಶಪಾಂಡೆ ಅವರಿಗೆ ವಿಭಾಗದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

ಎಐ ಯುಗದಲ್ಲಿ ವಿದ್ಯಾರ್ಥಿಗಳ ವೃತ್ತಿ ಉದ್ದೇಶಗಳನ್ನು ಸ್ಪಷ್ಟಗೊಳಿಸಲು ಸಹಾಯ ಮಾಡುವುದಕ್ಕಾಗಿ ಈ ಉಪನ್ಯಾಸ ಆಯೋಜಿಸಲಾಗಿತ್ತು.

Guest Talk on “Shaping Your Career in the Age of AI” by Microsoft Expert Mr. Chetan Mutalik Desai

The Department of Computer Science and Engineering of Angadi Institute of Technology and Management (AITM), Belagavi, in association with the AITM Training and Placement Cell and the AITM ACM Chapter, organized a Guest Talk on the topic “Shaping Your Career in the Age of AI” for students on Saturday, 23rd August 2025.

The resource person for the session was Mr. Chetan Mutalik Desai, Principal Product Manager, Microsoft, Washington, USA. Mr. Chetan, with over two decades of professional expertise in identity, security, and enterprise software, delivered an insightful talk emphasizing adaptability, continuous learning, and the significance of stepping beyond comfort zones in building future-ready careers in the AI-driven world.

The program commenced with the lighting of the lamp and rendition of the Naada Geete, followed by the welcome of dignitaries with saplings. A memento was presented to Mr. Chetan by Dr. Anand B. Deshpande, Principal & Director, AITM, as a token of appreciation.

In his address, Dr. Anand Deshpande highlighted the growing significance of Artificial Intelligence in every sector and encouraged students to embrace innovation, adaptability, and lifelong learning to thrive in this era of digital transformation. Sir also appreciated the departments for organizing such an impactful session that bridges academic learning with industry needs.

The event was graced by Dr. Dhanashree Kulkarni, Dean Academics, Head of CSE, and Faculty Advisor – ACM, AITM, Prof. Vishalkirthi Patil, Training & Placement Officer, AITM, Prof. Gautam Dematti, Faculty coordinator– ACM, AITM, Deans, HoDs, faculty members, and students. Prof. Priyanka Pujari, Assistant Professor, Department of CSE, was the Master of Ceremony

The session provided students with valuable guidance on aligning their skills and career aspirations with emerging opportunities in Artificial Intelligence.

The department expresses its gratitude to the Management Dr. Spoorti Patil, Director, SAEF, Administrator, Shri. Raju Joshi, Principal & Director, Dr. Anand B. Deshpande for their constant support in organizing the event. The session provided students with valuable guidance on aligning their skills and career aspirations with emerging opportunities in Artificial Intelligence.

Related Articles

Back to top button