Latest

ಸಚಿವ ಆರ್.ಅಶೋಕ್ ಗೆ ಕೊರೊನಾ ಪಾಸಿಟಿವ್; ಆಸ್ಪತ್ರೆಗೆ ದಾಖಲಾದ ಕಂದಾಯ ಮಂತ್ರಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಂಪುಟ ಸಚಿವರಿಗೂ ಕೊರೊನಾ ಸೋಂಕು ಹರಡಿದ್ದು, ಇದೀಗ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಕೋವಿಡ್ ದೃಢಪಟ್ಟಿದೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಇದೀಗ ಸಚಿವ ಆರ್.ಅಶೋಕ್ ಅವರಿಗೂ ಕೋವಿಡ್ ಪಾಸಿಟಿವ್ ಬಂದಿದ್ದು, ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

Home add -Advt

ಮೊನ್ನೆ ಸಿಎಂ ಬಸವರಾಜ್ ಬ್ಒಮ್ಮಾಯಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿಯೂ ಸಚಿವ ಆರ್. ಅಶೋಕ್ ಭಾಗಿಯಾಗಿದ್ದರು. ಇದೀಗ ಸಚಿವರಿಗೆ ಸೋಂಕು ಹಿನ್ನೆಲೆಯಲ್ಲಿ ಸಚಿವ ಸಂಪರ್ಕದಲ್ಲಿದ್ದ ಇನ್ನುಳಿದ ಮಂತ್ರಿಗಳು ಹಾಗೂ ಅಧಿಕಾರಿಗಳಿಗೂ ಕೋವಿಡ್ ಭೀತಿ ಎದುರಾಗಿದೆ.

5 ಜಿಲ್ಲೆಗಳಲ್ಲಿ ಒಮಿಕ್ರಾನ್ ಅಟ್ಟಹಾಸ; ವ್ಯಾಕ್ಸಿನ್ ಪಡೆಯದಿದ್ದರೆ ಜೀವಕ್ಕೆ ತೊಂದರೆ; ಎಚ್ಚರಿಕೆ ನೀಡಿದ ಆರೋಗ್ಯ ಸಚಿವ

Related Articles

Back to top button