
ಪ್ರಗತಿವಾಹಿನಿ ಸುದ್ದಿ: ಭಾರತೀಯ ಚಿತ್ರರಂಗದ ಅತ್ಯಂತ ಹಳೆಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ, ವರನಟ ಡಾ.ರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿದ್ದ ಬೇಡರ ಕಣ್ಣಪ್ಪ ಚಿತ್ರದ ನಿರ್ಮಾಣ ಸಂಸ್ಥೆ ಎವಿಎಂ ಪ್ರೊಡಕ್ಷನ್ ನ ಸರವಣನ್ ವಿಧಿವಶರಾಗಿದ್ದಾರೆ.
ಎವಿಎಂ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಪಕರಾಗಿ ಹಲವು ಹಿಟ್ ಚಿತ್ರಗಖನ್ನು ನೀಡಿದ್ದ ಖ್ಯಾತ ನಿರ್ಮಾಪಕ ಸರವಣನ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಸರವಣನ್ ವಿಶೇಷವಾಗಿ ದಕ್ಷಿಣ ಭಾರತದ ಚಿತ್ರರಂಗವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹ್ಸಿದ್ದರು.
ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಚಿಲನ ಚಿತ್ರಗಳನ್ನು ನಿರ್ಮಾಣ ಮಾಡಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು. 1943ರಲ್ಲಿ ಆರಂಭವಾದ ಎವಿಎಂ ನಿರ್ಮಾಣ ಸಂಸ್ಥೆಯನ್ನು ಸುಮಾರು ಅರ್ಧ ಶತಮಾನಗಳ ಕಾಲ ನಡೆಸಿದ ಕೀರ್ತಿ ಸರವಣನ್ ಅವರದ್ದು.
ರಜನಿಕಾಂತ್ ಅಭಿನಯದ ಶಿವಾಜಿ, ಯಜಮಾನ, ಸೂರ್ಯ ನಟನೆಯ ಅಯನ್, ರಾಣಾ ದಗ್ಗುಬಾಟಿ ಅಭಿನಯದ ಲೀಡರ್, ಅಜಿತ್ ಅಭಿನಯದ ತಿರುಪತಿ, ವಿಜಯ್ ಕಾಂತ್ ಅವರ ಶಕ್ತಿವೇಲ್, ಕಮಲ್ ಹಾಸನ್ ಅಭಿನಯದ ಸಕಲಕಲಾವಲ್ಲಭನ್ ಸೇರಿದಂತೆ ಹಲವು ಸಿನಿಮಾಗಳನ್ನು, ಹಲವು ಸ್ಟಾರ್ ನಟರನ್ನು ಸೃಷ್ಟಿಸಿದ್ದವತ್ರು ಸರವಣನ್.
ಸರವಣನ್ ಅವರ ಅಂತಿಮ ದರ್ಶನ ಪಡೆದ ನಟ ರಜನಿಕಾಂತ್, ಸರವಣನ್ ನನಗೆ ಅತ್ಯಂತ ಆಪ್ತರಾಗಿದ್ದರು. ಅವರೊಟ್ತಿಗೆ ಒಂಭತ್ತು ಸಿನಿಮಾಗಳನ್ನು ಮಾಡಿದ್ದೆ. ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿವೆ. ಎಲ್ಲರೂ ಅವರನ್ನು ಅಪ್ಪಾಜಿ ಎಂದೇ ಕರೆಯುತ್ತಿದ್ದರು. ಎಲ್ಲರೂ ಅವರಲ್ಲಿ ತಮ್ಮ ತಂದೆಯನ್ನು ಕಾಣುತ್ತಿದರು. ನನ್ನ ಕಷ್ಟದ ದಿನಗಳಲ್ಲಿ ಅವರು ನನ್ನ ಬೆನ್ನಿಗೆ ನಿಂತು ಸಹಾಯ ಮಾಡಿದ ವ್ಯಕ್ತಿ. ಅವರನ್ನು ಕಳೆದುಕೊಂದು ದುಃಖಿತನಾಗಿದ್ದೇನೆ ಎಂದು ಕಂಬನಿ ಮಿಡಿದ್ದಾರೆ.


