Latest

*ಲೈಂಗಿಕ ಕಿರುಕುಳ; ಪ್ರೊಫೇಸರ್ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ; ರಾಜ್ ಕೋಟ್: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ, ತನ್ನೊಂದಿಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದ ಪ್ರೊಫೆಸರ್ ನನ್ನು ಸಸ್ಪೆಂಡ್ ಮಾಡಿರುವ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ.

ವಿಜ್ಞಾನ ಪ್ರಾಧ್ಯಾಪಕರೊಬ್ಬರನ್ನು ಎಂ.ವಿ.ಎಂ. ವಿಜ್ಞಾನ ಹಾಗೂ ಗೃಹ ವಿಜ್ಞಾನ ಕಾಲೇಜಿನ ಟ್ರಸ್ಟಿಗಳು ಸಸ್ಪೆಂಡ್ ಮಾಡಿದ್ದಾರೆ. ವಿದ್ಯಾರ್ಥಿನಿಯರು ಮೂರು ತಿಂಗಳ ಹಿಂದೆಯೇ ಪ್ರೊಫೆಸರ್ ವಿರುದ್ಧ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆದರೆ ಯಾವುದೇ ತನಿಖೆ ಕೈಗೊಂಡಿರಲಿಲ್ಲ. ಮಾಧ್ಯಮಗಳು ಈ ಬಗ್ಗೆ ಸುದ್ದಿ ಬಿತ್ತರಿಸಿದ್ದವು. ಅಲ್ಲದೇ ಪ್ರೊಫೇಸರ್ ಹಾಗೂ ಕಾಲೇಜಿನ ವಿರುದ್ಧ ವಿದ್ಯಾರ್ಥಿಗಳ ಒಕ್ಕೂಟ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಕಾಲೇಜು ಸಮಿತಿ ತನಿಖೆಗೆ ನಿರ್ಧರಿಸಿತ್ತು.

Home add -Advt

ಲೈಂಗಿಕ ಕಿರುಕುಳ ವಿರೋಧಿ ಸಮಿತಿ ದೂರಿನಲ್ಲಿ ಸಾಕಷ್ಟು ಸಾಕ್ಷಿಗಳನ್ನು ಪಡೆದು ವರದಿಯನ್ನು ಕಾಲೇಜು ಟ್ರಸ್ಟಗೆ ಸಲ್ಲಿಸಿದ ಬಳಿಕ ಪ್ರೊಫೇಸರ್ ನನ್ನು ಅಮಾನತುಗೊಳಿಸಲಾಗಿದೆ.

*IAS ಹಾಗೂ IPS ಅಧಿಕಾರಿಗಳಿಗೆ ರಾಜ್ಯ ಸರ್ಕಾರದ ಭರ್ಜರಿ ಗಿಫ್ಟ್*

https://pragati.taskdun.com/iasips-officcerssalary-increase/

Related Articles

Back to top button