*ಬೆಳಗಾವಿ ಪೊಲೀಸರಿಂದ ಪ್ರಾಜೆಕ್ಟ್ ಸೈಬರ್ ಕ್ರೈಂ ಅಭಿಯಾನ*
![](https://pragativahini.com/wp-content/uploads/2025/02/IMG_20250211_112919_650_x_350_pixel.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸೈಬರ್ ಕ್ರೈಂ ತಡೆಗೆ ಬೆಳಗಾವಿ ಪೊಲೀಸ್ರು ಪ್ರಾಜೆಕ್ಟ್ ಸೈಬರ್ ಕ್ರೈಂ ಜಾಗೃತಿ ಅಭಿಯಾನ ಲಾಂಚ್ ಮಾಡಲಾಗಿದೆ.
ಬೆಳಗಾವಿ ನಗರದಲ್ಲಿ ಬೆಳಗಾವಿ ಪೊಲೀಸ್ ಇಲಾಖೆಯ ವತಿಯಿಂದ ಸೈಬರ್ ಕ್ರೈಂ ಕುರಿತು 1930 ಸಹಾಯವಾಣಿಯ ಕುರಿತು ಜಾಗೃತಿಯನ್ನು ಮೂಡಿಸಲಾಯಿತು. ಈ ಅಭಿಯಾನಕ್ಕೆ ನಗರದ ಹೃದಯ ಭಾಗವಾದ ರಾಣಿ ಚೆನ್ನಮ್ಮ ವೃತ್ತದಲ್ಲಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಅವರು ಚಾಲನೆ ನೀಡಿದರು.
ಹಲವಾರು ಜನರಿಗೆ ಸೈಬರ್ ಕ್ರೈಂ ಸಹಾಯವಾಣಿಯ ಮಾಹಿತಿ ಗೊತ್ತಿಲ್ಲ. ಬೆಳಗಾವಿಯಲ್ಲಿ ಹಲವಾರು ಜನರು ಸೈಬರ್ ಕ್ರೈಂಗೆ ಒಳಗಾಗಿದ್ದಾರೆ. ಮೊದಲೆಲ್ಲ ಮೊಬೈಲ್ ಬಳಕೆ ಕಡಿಮೆಯಾಗಿರುವುದರಿಂದ ಸೈಬರ್ ಕ್ರೈಂ ಇರಲಿಲ್ಲ. ಈಗ ಸೈಬರ್ ಕ್ರೈಂ ಸಂಖ್ಯೆ ಹೆಚ್ಚಾಗಿದೆ. ಈ ಕುರಿತು ಮೊದಲೂ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಬೆಳಗಾವಿ ಪೊಲೀಸ್ ಇಲಾಖೆಯ ವತಿಯಿಂದ ಪ್ರೋಜೆಕ್ಟ್ ಸೈಬರ್ ಕ್ರೈಂ ಅವೇರನೆಸ್ ಎಂದು ಜಾಗೃತಿ ಮೂಡಿಸಲಾಗುತ್ತಿದೆ.
ಪ್ರಮುಖ ಸ್ಥಳಗಳಲ್ಲಿ ದೊಡ್ಡದಾದ ಸುಮಾರು 70 ಪ್ಲೆಕ್ಸಗಳನ್ನು ಹಾಕಲಾಗುತ್ತಿದೆ. ಎರಡನೇಯ ಹಂತವಾಗಿ ಶಾಲಾ-ಕಾಲೇಜು ಮತ್ತು ಸರ್ಕಾರಿ ಕಾರ್ಯಾಲಯಗಳಲ್ಲಿಯೂ ಜಾಗೃತಿ ಮೂಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದರು.
ಈ ಸಂದರ್ಭದಲ್ಲಿ ಕ್ರೈಂ ಎಸಿಪಿ ರಘು, ಸಿಪಿಐ ಬಿ.ಆರ್. ಗಡ್ಡಕರ ಸೇರಿದಂತೆ ಇನ್ನುಳಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ