
ಅಪಘಾತ ತಪ್ಪಿಸಲು ಹೋದ ಪಿಎಸ್ಐ ರಸ್ತೆ ಅಪಘಾತಕ್ಕೆ ಬಲಿ
ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರ :
ರಾಂಗ್ ಸೈಡ್ ನಿಂದ ಬಂದು ಅಪಘಾತಕ್ಕೆ ಕಾರಣವಾಗುತ್ತಿದ್ದ ವಾಹನಗಳನ್ನು ತಡೆದು ಬುದ್ದಿ ಹೇಳುತ್ತಿದ್ದ ಪಿಎಸ್ಐ ರಾಂಗ್ ಸೈಡ್ ನಿಂದ್ ಕಾರಿಗೆ ಬಲಿಯಾಗಿದ್ದಾರೆ.
ಕಿತ್ತೂರು ಸಮೀಪ ದೇವರಶೀಗೆಹಳ್ಳಿ ಕ್ರಾಸ್ ಬಳಿ ಅವಘಟ ಸಂಭವಿಸಿದೆ. ಕಿತ್ತೂರು ಪಿಎಸ್ಐ ವೀಹರಣ್ಣ ಲಟ್ಟಿ ಸಾವಿಗೀಡಾದವರು. ವೀರಣ್ಣ ಗೋಕಾಕ ತಾಲೂಕಿನ ಬೆಣಚಿನಮರಡಿಯವರು. ಅವರಿಗೆ 46 ವರ್ಷ ವಯಸ್ಸಾಗಿತ್ತು.
ರಾಷ್ಟ್ರೀಯ ಹೆದ್ದಾರಿಯ ಮೇಲೆ ನಿಂತಿದ್ದ ಪಿಎಸ್ಐ ವೀರಣ್ಣ ಲಟ್ಟಿ ರಾಂಗ್ ಸೈಡ್ ನಿಂದ್ ಬರುವ ವಾಹನಗಳನ್ನು ತಡೆಯುತ್ತಿದ್ದರು. ಅವರಿಗೆ ಬುದ್ದಿ ಹೇಳಿ, ರಾಂಗ್ ಸೈಡ್ ನಿಂದ ಬಂದರೆ ಅಪಘಾತಗಳು ಸಂಭವಿಸುತ್ತವೆ. ಹಾಗಾಗಿ ಹಾಗೆ ಬರಬೇಡಿ ಎಂದು ಹೇಳುತ್ತಿದ್ದರು. ಈ ವೇಳೆ ರಾಂಗ್ ಸೈಡ್ ನಿಂದಲೇ ವೇಗವಾಗಿ ಬಂದ ಕಾರೊಂದು ಪಿಎಸ್ಐಗೆ ಡಿಕ್ಕಿ ಹೊಡೆದಿದೆ.
ತಲೆಗೆ ತೀವ್ರ ಗಾಯಗೊಂಡು ಕಿವಿಯಿಂದ ರಕ್ತ ಸೋರುತ್ತಿತ್ತು. ತಕ್ಷಣ ಸ್ಥಳೀಯ ಸಿಪಿಐ ಅವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಲಟ್ಟಿಗೆ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ