Latest

ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಹಲವು ಸಚಿವರು ತಮಗೆ ಸಿಕ್ಕ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಹೊಸ ತಲೆನೋವು ಶುರುವಾಗಿದೆ.

ತಮಗೆ ಸಿಕ್ಕಿರುವ ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆನಂದ್ ಸಿಂಗ್, ನಾನು ನಿರೀಕ್ಷಿಸಿದ ಖಾತೆಯನ್ನು ನನಗೆ ಕೊಟ್ಟಿಲ್ಲ. ನಾನು ಬೇರೆ ಖಾತೆ ನೀಡುವಂತೆ ಹಿಂದೆಯೇ ಸಿಎಂ ಗೆ ಹೇಳಿದ್ದೆ. ಆದರೆ ಈಗ ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ನಿಡಿರುವುದು ನನಗೆ ನೋವು ತಂದಿದೆ. ಈ ಬಗ್ಗೆ ನಾಳೆ ಸಿಎಂ ಭೇಟಿಯಾಗಿ ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದಿದ್ದಾರೆ.

Home add -Advt

ಒಂದು ವೇಳೆ ನನ್ನ ಖಾತೆ ಬದಲಾವಣೆ ಮಾಡಿ ನಾನು ಕೇಳಿದ ಖಾತೆ ನೀಡಿಲ್ಲವಾದಲ್ಲಿ ಮುಂದೆ ಏನು ನಿರ್ಧಾರ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ನಡುವೆ ಸಚಿವ ಶ್ರೀರಾಮುಲು ಕೂಡ ತಮಗೆ ನೀಡಿರುವ ಸಾರಿಗೆ ಇಲಾಖೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಅವರೂ ಕೂಡ ಸಿಎಂ ಭೇಟಿಗೆ ನಿರ್ಧರಿಸಿದ್ದಾರೆ. ಒಟ್ಟಾರೆ ಖಾತೆ ಹಂಚಿಕೆ ಬೆನ್ನಲ್ಲೇ ಸಚಿವರ ಅಸಮಾಧಾನ ಭುಗಿಲೆದ್ದಿದೆ.
ಬೊಮ್ಮಾಯಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ; ಅರಗ ಜ್ಞಾನೇಂದ್ರಗೆ ಗೃಹ, ಸುನೀಲ್ ಕುಮಾರ್ ಗೆ ಇಂಧನ

ಸಚಿವ ಹೆಬ್ಬಾರ್ ಸಭೆಗೆ ತೆರಳುವಾಗ ಭೀಕರ ಅಪಘಾತ; ಪಿಡಬ್ಲ್ಯುಡಿ ಎಂಜಿನಿಯರ್ ಸ್ಥಳದಲ್ಲೇ ದುರ್ಮರಣ

Related Articles

Back to top button