Kannada NewsKarnataka NewsLatestPolitics

*ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಇಡಿಗೆ ದೂರು*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರದಲ್ಲಿ ಮತ್ತೆ ವರ್ಗಾವಣೆ ದಂಧೆ ಪ್ರತಿಧ್ವನಿಸಿದ್ದು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದೆ.

ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಇಡಿಗೆದೂರು ನೀಡಿದ್ದಾರೆ. ಸಚಿವರು ಅಬಕಾರಿ ಇಲಾಖೆ ಡಿಸಿ, ಡಿವೈ ಎಸ್ ಒಇಗಳಿಂದ ಹಣ ಪಡೆದು ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಚಿವರು ಹಣ ಸಂಗ್ರಹಿಸುತ್ತಿದ್ದು ಈವರೆಗೆ 18 ಕೋಟಿ ಲಂಚ ಪಡೆದಿದ್ದಾರೆ ಲಂಚದ ಹಣದಲ್ಲಿ ಸಚಿವರಿಗೆ ಸಿಂಹಪಾಲು ನೀಡಲಾಗಿದೆ 18 ಕೋಟಿ ಹಣದಲ್ಲಿ 13 ಕೋಟಿ ಹಣ ಸಚಿವರ ಖಾತೆಗೆ ಬಿದ್ದಿದೆ. ಉಳಿದ ಹಣ ಸಹಕಾರ್ಯದರ್ಶಿ ಸೇರಿದಂತೆ ಕೋಲಾರ ಅಬಕಾರಿ ಡಿಸಿ ಬಸವರಾಜ್ ಸಂದಿಗ್ವಾಡ, ರಂಗಪ್ಪ, ಬೆಂಗಳೂರು ದಕ್ಷಿಣ ಅಬಕಾರಿ ಡಿಸಿ ವಿವೇಕ್ ಖಾತೆಗೆ ಹಣ ಹೋಗಿದೆ ಎಂದು ದೂರು ನೀಡಿದ್ದಾರೆ.

Home add -Advt

Related Articles

Back to top button