Latest

ದೇಶದ ಟಾಪ್ 10 ಮಾದರಿ ಠಾಣೆಗಳ ಪಟ್ಟಿಯಲ್ಲಿ ರಾಜ್ಯದ ಮಾನ್ವಿ ಪೊಲೀಸ್ ಠಾಣೆ

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಕರ್ನಾಟಕ ಪೊಲೀಸ್ ಹಿರಿಮೆಗೆ ಮತ್ತೊಂದು ಗರಿ. ದೇಶದ ಟಾಪ್ 10 ಪೊಲೀಸ್ ಠಾಣೆಗಳ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯ ಮಾನ್ವಿಯ ಪೊಲೀಸ್ ಠಾಣೆಗೆ 5ನೇ ಸ್ಥಾನ ಸಿಕ್ಕಿದೆ.

ದೇಶದ ಟಾಪ್ 10 ಮಾದರಿ ಪೊಲೀಸ್ ಠಾಣೆ ಪಟ್ತಿಯಲ್ಲಿ ಈ ಠಾಣೆಗೆ 5 ಸ್ಥಾನ ಸಿಕ್ಕಿರುವುದು ಸಂತಸದ ವಿಚಾರ. ಸಾರ್ವಜನಿಕರೊಂದಿಗೆ ಪೊಲೀಸ್ ಸಿಬ್ಬಂದಿಗಳ ಸಂಪರ್ಕ, ಕಟ್ಟಡದ ಸುವ್ಯವಸ್ಥೆ, ಸಿಬ್ಬಂದಿಗಳ ಶಿಸ್ತು, ಕಾರ್ಯಾಧ್ಯಕ್ಷತೆ, ಕಡತ ವಿಲೇವಾರಿ, ಮೂಲಸೌಕರ್ಯ, ಅಪರಾಧ ತಡೆಗೆ ಕೈಗೊಂಡ ಕ್ರಮಗಳು, ಸಂಚಾರ ಸುರಕ್ಷತೆ, ಅಪಘಾತ ತಡೆಗೆ ಪೊಲೀಸರ ಕಾರ್ಯ ಸೇರಿದಂತೆ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಂಡಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.

Home add -Advt

ಈ ಹಿನ್ನೆಲೆಯಲ್ಲಿ ಮಾನ್ವಿ ಠಾಣೆ ಪೊಲೀಸ್ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Related Articles

Back to top button