ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಹಿಂದವಾಡಿ ೩ನೇ ಕ್ರಾಸ್, ಸಿಂಡಿಕೇಟ ಬ್ಯಾಂಕ್ (ಗೋವಾವೇಸ ಹತ್ತಿರ) ಸುಮನ ಕುಳ್ಳೋಳಿ ಎನ್ನುವವರ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಬಂದ ಖಚಿತ ಮಾಹಿತಿಯಂತೆ ಎಸಿಪಿ ಮಹಾಂತೇಶ್ವರ ಜಿದ್ದಿ ನೇತೃತ್ವದಲ್ಲಿ ಸಂಜೀವ ಕಾಂಬಳೆ ಪಿಐ ಸಿಸಿಐಬಿ, ಎಎಸ್ಐ ಬಿ. ಆರ್. ಮುತ್ನಾಳ, ಆರ್ ಎಸ್ ನಾಯಿಕವಾಡಿ, ಎಸ್ ಸಿ ಕೋರೆ, ಎಸ್ ಆರ್ ಮೇತ್ರಿ, ಆರ್ ಎಸ್ ನಾಯಿಕವಾಡಿ, ಅರುಣ ಕಾಂಬಳೆ, ಮಹೇಶ ವಡೇಯರ್, ಎಸ್ ಎಸ್ ಪಾಟೀಲ, ಎಂ ಎಸ್ ಮಾಂಗ್ ಹಾಗೂ ಅಪರಾಧ ವಿಭಾಗದ ಸಂಗೀತಾ ಮುದಕಪ್ಪಗೋಳ, ಎಸ್. ಜೆ. ತಳಕೇರಿ ರವರೊಂದಿಗೆ ದಾಳಿ ಮಾಡಿ ಅಲ್ಲಿ ಮಹಿಳೆಯರನ್ನು ವೇಶಾವಾಟಿಕೆಯಲ್ಲಿ ತೊಡಗಿಸಿದ್ದ ಸುಮನ ಮಹಾಲಿಂಗಪ್ಪ ಕುಳ್ಳೋಳಿ (೪೦ ವರ್ಷ) ಹಾಗೂ ಮನೋಜ ಭರಮಪ್ಪಾ ಪಾಟೀಲ (೩೦ ವರ್ಷ) ಶೇರಿ ಗಲ್ಲಿ ಬೆಳಗಾವಿ ಇವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ಇಬ್ಬರು ಮಹಿಳೆಯನ್ನು ರಕ್ಷಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ