LatestNational

*ಪ್ರಯಾಣಿಕರಿಗೆ ಶಾಕ್ ನೀಡಿದ ರೈಲ್ವೆ ಇಲಾಖೆ*

ಪ್ರಗತಿವಾಹಿನಿ ಸುದ್ದಿ: ದೂರದ ಪ್ರಯಾಣಕ್ಕೆ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೆಚ್ಚಾಗಿ ಜನರು ರೈಲ್ವೆ ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ರೈಲ್ವೆ ಇಲಾಖೆ ಜನರಿಗೆ ದೊಡ್ಡ ಶಾಕ್ ನೀಡಲು ಮುಂದಾಗಿದೆ.

ಮುಂದಿನ ತಿಂಗಳಿನಿಂದ  ರೈಲು ದರಗಳು ಸ್ವಲ್ಪ ಹೆಚ್ಚಾಗಲಿವೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಎಸಿ ಅಲ್ಲದ ವರ್ಗದ ದರವನ್ನು ಪ್ರತಿ ಕಿ.ಮೀ.ಗೆ 1 ಪೈಸೆ ಹೆಚ್ಚಿಸಲಾಗಿದ್ದರೆ, ಎಸಿ ಕ್ಲಾಸ್‌ಳಲ್ಲಿ ಪ್ರಯಾಣಿಸುವ ಟಿಕೆಟ್‌ಗಳು ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಾಗಲಿದೆ ಎಂದು ತಿಳಿಸಲಾಗಿದೆ.

Home add -Advt

ಕೊನೆಯ ಬಾರಿಗೆ ರೈಲು ದರವನ್ನು 2020ರ ಜನವರಿ 1 ರಂದು ಹೆಚ್ಚಿಸಲಾಗಿತ್ತು. ನಂತರ ಸಾಮಾನ್ಯ ಮತ್ತು ಮೇಲ್/ಎಕ್ಸ್‌ಪ್ರೆಸ್ ರೈಲುಗಳ ಎರಡನೇ ದರ್ಜೆಯ ದರವನ್ನು ಕ್ರಮವಾಗಿ 1 ಪೈಸೆ/ಕಿಮೀ ಮತ್ತು 2 ಪೈಸೆ/ಕಿಮೀ ಹೆಚ್ಚಿಸಲಾಯಿತು. ಸ್ಟೀಪರ್ ಕ್ಲಾಸ್ ಮತ್ತು ಎಲ್ಲಾ ಎಸಿ ಕ್ಲಾಸ್ ದರಗಳನ್ನು ಕ್ರಮವಾಗಿ 2 ಪೈಸೆ/ಕಿಮೀ ಮತ್ತು 4 ಪೈಸೆ/ಕಿಮೀ ಹೆಚ್ಚಿಸಲಾಯಿತು.

ರೈಲು ಪ್ರಯಾಣದ ಈ ಹೊಸ ಏರಿಕೆ ಕಳೆದ 12 ವರ್ಷಗಳಲ್ಲೇ ಅತಿ ಕಡಿಮೆ ದರ ಏರಿಕೆಯಾಗಿದೆ. 500 ಕಿ.ಮೀ.ವರೆಗಿನ ಎರಡನೇ ದರ್ಜೆಯ ಪ್ರಯಾಣ ದರವು ಬದಲಾಗದೆ ಉಳಿಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 500 ಕಿ.ಮೀ.ಗಿಂತ ಹೆಚ್ಚಿನ ದೂರಕ್ಕೆ ದರವನ್ನು ಪ್ರತಿ ಕಿ.ಮೀ.ಗೆ ಅರ್ಧ ಪೈಸೆಯಂತೆ ಹೆಚ್ಚಿಸಬಹುದು.

Related Articles

Back to top button