Kannada NewsKarnataka NewsLatestPolitics

ಹುಬ್ಬಳ್ಳಿಯಲ್ಲಿ ಇಂದು ರಜತ ಸಂಭ್ರಮ; ಭರ್ಜರಿ ಸಿದ್ಧತೆ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಕ್ರಿಯಾಶೀಲ ಯುವ ಕಾಂಗ್ರೆಸ್ ನಾಯಕ ರಜತ್ ಉಳ್ಳಾಗಡ್ಡಿಮಠ ಅವರ 32ನೇ ಜನ್ಮ ದಿನದ ನಿಮಿತ್ತ ಹುಬ್ಬಳ್ಳಿಯಲ್ಲಿ ಬುಧವಾರ ರಜತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ಸಂಜೆ ಗಿರಣಿಚಾಳ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಭರ್ಜರಿ ಸಿದ್ಥತೆ ನಡೆದಿದೆ. 10 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಈ ಹಿಂದೆ ಚೀನಾ ಧ್ವಜಕ್ಕೆ ಕೇಂದ್ರ ಸರಕಾರ ಮಣೆ ಹಾಕಿದಾಗ ಅದನ್ನು ವಿರೋಧಿಸಿ ಅಭಿಯಾನ ನಡೆಸಿದ್ದ ರಜತ್, ಕೆಂಪುಕೋಟೆ ಸೇರಿದಂತೆ ಇಡೀ ರಾಷ್ಟ್ರಕ್ಕೆ ರಾಷ್ಟ್ರಧ್ವಜ ಪೂರೈಸುವ ಗರಗ ಮತ್ತು ಬೆಂಗೇರಿಯಲ್ಲಿ ಖಾದಿ ಧ್ವಜ ತಯಾರಕರಿಗಾಗಿ ತಮ್ಮ ಈ ಬಾರಿಯ ಜನ್ಮದಿನವನ್ನು ಮುಡಿಪಾಗಿಟ್ಟಿದ್ದಾರೆ.

ಕಳೆದ 3 ವರ್ಷದಿಂದ ರಜತ್ ಅಭಿಮಾನಿಗಳು ಅದ್ಧೂರಿಯಿಂದ ಜನ್ಮದಿನವನ್ನು ಆಯೋಜಿಸುತ್ತ ಬಂದಿದ್ದಾರೆ. ಸಧ್ಯವೇ ನಡೆಯಲಿರುವ ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿರುವ ರಜತ್, ರಾಜಕೀಯಕ್ಕೂ ಈ ಜನ್ಮ ದಿನಾಚರಣೆಗೂ ಸಂಬಂಧವಿಲ್ಲ, ಇದನ್ನು ನೊಂದವರಿಗಾಗಿ, ಬಡಜವರಿಗಾಗಿ, ಸಾಧಕರಿಗಾಗಿ ಆಚರಿಸಲಾಗುತ್ತಿದೆ ಎನ್ನುತ್ತಾರೆ.

ರಜತ್ ಪರಿಚಯ:

ಜನರ ಸೇವೆ ಮಾಡಲು ಅಧಿಕಾರವೇ ಬೇಕಿಲ್ಲ. ಇಚ್ಛಾಶಕ್ತಿ, ಸಾಮಾಜಿಕ ಮನೋಭಾವ ಇದ್ದರೆ ಸಾಕು. ಜತೆಗೆ ಕುಟುಂಬದ ಹಿರಿಯರು ಹಾಕಿಕೊಟ್ಟ ಪರಂಪರೆ ಮುನ್ನಡೆಸಬೇಕೆಂಬ ಹಂಬಲವೊಂದಿದ್ದರೆ ಸಮಾಜದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಬಹುದು. ಆ ಸಾಲಿಗೆ ಉತ್ತರ ಕರ್ನಾಟಕ ಭಾಗದ ಭವಿಷ್ಯದ ಭರವಸೆಯ ನಾಯಕರಾಗಿ ನಿಲ್ಲುತ್ತಾರೆ ರಜತ ಉಳ್ಳಾಗಡ್ಡಿ ಮಠ.

ಹೌದು. ಸಮಾಜ ಸೇವಕ, ಯುವ ನಾಯಕ ರಜತ‌ ಉಳ್ಳಾಗಡ್ಡಿ ಮಠ ಇವರ ಹೆಸರೀಗ ಎಲ್ಲೆಡೆ ಚಿರಪರಿಚಿತ. ಅಧಿಕಾರಕ್ಕಾಗಿ ಹಂಬಲಿಸಿದವರಲ್ಲ, ಸಮಾಜ ಸೇವೆ ಬಿಟ್ಟವರಲ್ಲ. ತಾವು ಮಾತ್ರವೇ ನಾಯಕರಾಗಿ ಬೆಳೆಯಬೇಕೆಂಬ ಹಂಬಲವೂ ಇಲ್ಲ. ಹಲವು ನಾಯಕರ ಹೆಗಲಿಗೆ ಹೆಗಲು ಕೊಟ್ಟು ಸಂಘಟನೆ ಮಾಡಿದವರು. ಇಂತಹ ಯುವ ಮುಖಂಡ, ಸದ್ಯ ಹುಬ್ಬಳ್ಳಿ-ಧಾರವಾಡ ಭಾಗದ ಯುವಕರ, ಜನರ ಕಣ್ಣಲ್ಲಿ ಭರವಸೆಯ ನಾಯಕರಾಗಿ ಹೊರ ಹೊಮ್ಮಿದ್ದಾರೆ.

ಉತ್ತಮ ನಡವಳಿಕೆಯುಳ್ಳ ರಜತ‌ ಅವರಿಗೆ ರಾಜಕೀಯ ನಂಟು ಬಾಲ್ಯದಿಂದಲೇ ಅಂಟಿಕೊಂಡು ಬಂದಿದ್ದು. ತಂದೆಯವರಾದ ದಿ. ವಿಶ್ವಪ್ರಕಾಶ ಉಳ್ಳಾಗಡ್ಡಿಮಠ ಅವರಂತೆಯೇ ರಾಜಕಾರಣವನ್ನು ಚಿಕ್ಕಂದಿನಿಂದಲೇ ಆರಂಭಿಸಿದವರು. ಜನರೊಂದಿಗೆ ಬೆರತವರು.

ಎನ್‌ ಎಸ್‌ ಯುಐ ಮೂಲಕ 2008ರಲ್ಲಿ ವಿದ್ಯಾರ್ಥಿ ನಾಯಕರಾಗಿ ಬೆಳೆದ ರಜತ, ಮುಂದೆ ಕಾಂಗ್ರೆಸ್‌ ನಲ್ಲಿ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಸದ್ಯ, ಹುಬ್ಬಳ್ಳಿಯ ವಿದ್ಯಾನಗರದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಾಗಂತ, ಈಗ ರಜತ‌ ಅವರು ಬರೀ ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಅಷ್ಠೇ ಸೀಮಿತವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿಲ್ಲ. ಉತ್ತರ ಕರ್ನಾಟಕದ ಬಹುತೇಕ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಯಶಸ್ವಿ ಸಭೆ- ಸಮಾವೇಶಗಳನ್ನು ಸಂಘಟಿಸಿ, ಪಕ್ಷದ ನಾಯಕರ ಪ್ರೀತಿಗೆ ಪಾತ್ರರಾಗಿದ್ದಾರೆ.

ಉತ್ತರ ಕರ್ನಾಟಕ ಅದರಲ್ಲೂ ಹುಬ್ಬಳ್ಳಿ-ಧಾರವಾಡದಲ್ಲಿ ಕಳೆದ ಒಂದೂವರೆ ದಶಕದಿಂದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಸಭೆಯಲ್ಲೂ ಕಾಂಗ್ರೆಸ್‌ ಪಕ್ಷದ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದ್ದಾರೆ.

ಪ್ರಮುಖವಾಗಿ 2021ರಲ್ಲಿ ನಡೆದ ಹುಬ್ವಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಜತ‌ ಅವರ ರಾಜಕೀಯ ನಾಯಕತ್ವ ಪ್ರಖರಗೊಂಡಿದ್ದು. ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವ್ಯಾಪ್ತಿಯ 12 ವಾರ್ಡ್‌ ಗಳ ಪೈಕಿ 7 ವಾರ್ಡ್‌ ಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ರಜತ ಅವರ‌ ಪಾತ್ರ ಅಷ್ಟಿಷ್ಟಲ್ಲ.

ಸದಾ ಸಮಾಜ ಸೇವೆಯಲ್ಲಿ ಮುಂದು…

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ದೇಶಾದ್ಯಂತ ಲಾಕ್‌ ಡೌನ್‌ ಹೇರಲಾಗಿತ್ತು. ಆಗ ದುಡಿಮೆಯನ್ನೇ ನಂಬಿಕೊಂಡು ಬದುಕುವ ಕೂಲಿಕಾರರ ಬದುಕು ದುಸ್ತರವಾಗಿತ್ತು. ಸ್ನೇಹಿತರು, ವಿಶ್ವಾಸಿಕರೊಂದಿಗೆ ಪ್ರತಿದಿನ ಆಹಾರದ ಕಿಟ್‌ ಗಳನ್ನು ಅಶಕ್ತರು, ಅಸಹಾಯಕರು, ಬಡವರು ಮತ್ತು ನಿರ್ಗತಿಕರಿಗೆ ವಿತರಿಸಿ ಬಡವರ ಹಸಿವು ನೀಗಿಸುವ ಪ್ರಯತ್ನ ಮಾಡಿದರು.

ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ, ಎಲ್ಲೆಡೆ ಹೊಟೇಲ್‌ಗಳು ಬಂದ್ ಆಗಿದ್ದವು. ಹುಬ್ಬಳ್ಳಿ-ಧಾರವಾಡಕ್ಕೆ ರೋಗಿಗಳನ್ನು ಕರೆದುಕೊಂಡು ಬರುವ ಅಸಂಖ್ಯಾತರಿಗೆ ಊಟೋಪಚಾರದ ವ್ಯವಸ್ಥೆ ಮಾಡುವ ಮೂಲಕ ಅನೇಕರ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ. ಇನ್ನು ಲಾಕ್‌ ಡೌನ್‌ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ವೈದ್ಯಕೀಯ ಸೇವೆ ಮಾಡಿದ 10 ಸಾವಿರ ಕೊರೊನಾ ವಾರಿಯರ್‌ ಗಳನ್ನು ಕೂಡ ಗುರುತಿಸಿ ಗೌರವಿಸಿದರು.

ವಿದ್ಯಾರ್ಥಿಗಳ ಮಿತ್ರ; ದುಡಿಯುವ ವರ್ಗದವರ ʻಅಪತ್ಭಾಂಧವʼ

ಕೋವಿಡ್‌ ಸಮಯದಲ್ಲಿ ಸರ್ಕಾರಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗಿದ್ದನ್ನು ಮನಗಂಡ ರಜತ‌ ಅವರು, 60 ಸಾವಿರಕ್ಕೂ ಹೆಚ್ಚು ನೋಟ್‌ ಪುಸ್ತಕ, ಇನ್ನಿತರ ಪರಿಕರಗಳನ್ನು ವಿತರಿಸಿ ವಿದ್ಯಾರ್ಥಿಗಳ ಓದುವಿಗೆ ನೆರವಾದರು.

ಕಟ್ಟಡ ನಿರ್ಮಾಣ, ಇನ್ನಿತರ ದುಡಿಯುವ ವರ್ಗದ ಜನರ ಮಕ್ಕಳಿಗೆ, ಬಡ ಆಟೋ ಚಾಲಕರ ಮಕ್ಕಳಿಗೆ ಲ್ಯಾಪ್‌ ಟಾಪ್‌ ನೀಡುವ ಮೂಲಕ ಹಲವರ ವಿದ್ಯಾರ್ಜನೆಗೆ ನೆರವಾಗಿದ್ದಾರೆ. ಹೀಗೆ ಹತ್ತು ಹಲವು ರೀತಿ ಬಡವರು ಮತ್ತು ಅಸಹಾಯಕ ಜನರಿಗೆ ಸಹಾಯ ಮಾಡಿದ ಸಾರ್ಥಕತೆ ಇವರಿಗಿದೆ.

ಪಕ್ಷದ ಸಂಘಟನೆ, ರಾಜಕಾರಣ ಕೆಲಸದ ಜತೆ ದೇಶಭಕ್ತಿಯ ಜಾಗೃತಿ ಮೂಡಿಸುವ ಮಹತ್ವದ ಕಾರ್ಯಗಳನ್ನು ಮಾಡಿ ಸೈ ಎನಿಸಿಕೊಂಡಿದ್ಧಾರೆ.

75ನೇ ಸ್ವಾತಂತ್ರ್ಯ ದಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಾಲಿಯಸ್ಟರ್‌ ರಾಷ್ಟ್ರಧ್ವಜ ಬಳಸಬಹುದೆಂಬ ನೀತಿ ಪ್ರಕಟಿಸಿದ್ದನ್ನು ಕಟುವಾಗಿ ವಿರೋಧಿಸಿದರು. ಅದಕ್ಕಾಗಿ ʻಚರಕ ಆಂದೋಲನʼದ ಮೂಲಕ ಪಾಲಿಯಸ್ಟರ್‌ ಧ್ವಜದ ವಿರುದ್ಧ ಧ್ವನಿ ಎತ್ತಿದರು.

ಖಾದಿ ಧ್ವಜ ಬಳಕೆಗೆ ಆದ್ಯತೆ ನೀಡಬೇಕೆಂಬ ಸದುದ್ದೇಶ ರಜತ ಅವರದು. ಪರಿಣಾಮ ಚೀನಾದ ಪಾಲಿಯಸ್ಟರ್‌ ಧ್ವಜ ಬಳಕೆ ಬೇಡ- ನಮ್ಮ ದೇಶದ ಹತ್ತಿಯಿಂದ ತಯಾರಿಸಿದ ತಿರಂಗಾ ಧ್ವಜ ಬಳಸಿ ಎಂದು ದೊಡ್ಡ ಆಂದೋಲನಕ್ಕೆ ನಾಂದಿಯಾದರು. ಈ ಹೋರಾಟದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಹುಬ್ಬಳ್ಳಿಗೆ ಬಂದಿದ್ದು ಹೆಗ್ಗಳಿಕೆ. ಧ್ವಜ ತಯಾರಿಸುವ ಖಾದಿ ಗ್ರಾಮೋದ್ಯೋಗಕ್ಕೆ ಭೇಟಿ ನೀಡಿ ರಜತ ಅವರ ಹೋರಾಟವನ್ನು ಬೆಂಬಲಿಸಿದ್ದು ಹೋರಾಟಕ್ಕೆ ಶಕ್ತಿ ಬಂದಿತು. ಅಲ್ಲದೆ, ರಾಜ್ಯ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌. ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಅನೇಕ ನಾಯಕರು ರಜತ ಅವರ ವಿನೂತನ ಹೋರಾಟಕ್ಕೆ ಸಾಥ್‌ ನೀಡಿದರು.

ಧಾರ್ಮಿಕ ಕಾರ್ಯಕ್ಕೂ ಸೈ

ಮೊದಲಿನಿಂದಲೂ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಉತ್ತೇಜನ ಕೊಟ್ಟ ಕುಟುಂಬದವರಾದ ಕಾರಣ ಧರ್ಮ ಕಾರ್ಯಗಳಲ್ಲಿ ರಜತ ಅವರಿಗೆ ಅತೀವ ಆಸಕ್ತಿ. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಬಹಳ ವೈಭವವಾಗಿ ನಡೆಯುವ ಗಣೇಶೋತ್ಸವಕ್ಕೆ ಒಂದು ಹೊಸ ರೂಪ ನೀಡಬೇಕೆಂದು 10 ಗ್ರಾಂ ಬೆಳ್ಳಿಯ ನೂರಾರು ನಾಣ್ಯಗಳನ್ನು ಸಾರ್ವಜನಿಕ ಗಣೇಶ ಪೆಂಡಾಲಿನವರಿಗೆ ನೀಡಿ ಪ್ರೋತ್ಸಾಹ ನೀಡಿದರು.

ಮತ್ತೆ, ಸಾರ್ವಜನಿಕ ಗಣೇಶೋತ್ಸವ ಆರಂಭಿಸಲು ಅವಳಿ ನಗರಾದ್ಯಂತ ಪ್ರತಿ ಗಣೇಶೋತ್ಸವ ಸಮಿತಿಗೆ ಸ್ವತಃ ಭೇಟಿ ನೀಡಿ, ತಲಾ 5000 ರೂ.ಗಳಂತೆ ಹಲವಾರು ಸಮಿತಿಗಳಿಗೆ ನೀಡಿದ್ದಾರೆ. ಪರಿಸರ ಸ್ನೇಹಿ ಗಣೇಶನನ್ನು ಇಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದ್ದಾರೆ.

ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರಸಿದ್ಧ ಹೋಳಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ನೆರವಾಗುತ್ತ ನಾಡಿನ ಸಂಪ್ರದಾಯ, ಪರಂಪರೆ ಹಬ್ಬಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಸರ್ವಧರ್ಮೀಯರ ಪ್ರೇಮಿಯೂ ಹೌದು..!!

ರಜತ ಅವರು ಕೇವಲ ಹಿಂದೂ ಧರ್ಮೀಯರಿಗೆ ಅಷ್ಟೇ ಅಲ್ಲ; ಎಲ್ಲ ಜಾತಿ, ಧರ್ಮ, ಭಾಷಿಗರಿಗೂ ಇಷ್ಟವಾಗುವ ವ್ಯಕ್ತಿತ್ವ. ಬರೀ ಮಠಮಾನ್ಯಗಳಿಗೆ ಪ್ರಿಯರಾಗದೆ, ಮಸೀದಿ, ಚರ್ಚ್‌ ಗಳಿಗೂ ಹೋಗುವ ಪರಿಪಾಠ ಹೊಂದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ
ಪುರೋಹಿತ. ಆಚಾರ್ಯ, ಜಂಗಮ, ಪಾದ್ರಿ, ಮೌಲ್ವಿಗಳು ಹೀಗೆ ಎಲ್ಲ ಧರ್ಮದ 10 ಸಾವಿರ ಗಣ್ಯರಿಗೆ ಗೌರವಿಸುವ ವಿನೂತನ ಕಾರ್ಯವನ್ನು ಮಾಡಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ಧಾರೆ.

ಒಟ್ಟಾರೆ, ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಗಾಗಿ ತಮ್ಮ ಕುಟುಂಬದ ಹಿರಿಯರ ಸೇವೆ ಮುಂದುವರಿಸಲು-ಅವರ ಸ್ಮರಣೆಗಾಗಿ ಸದಾ ಬಡವರಿಗಾಗಿ ಹಂಬಲಿಸುವ ರಜತ ಉಳ್ಳಾಗಡ್ಡಿಮಠ ಅವರು, ಉತ್ತರ ಕರ್ನಾಟಕದ ಭಾಗದ ಭವಿಷ್ಯದ ನಾಯಕರಾಗಿ ಹೊರ ಹೊಮ್ಮುವುದರಲ್ಲಿ ಸಂಶಯವಿಲ್ಲ.
ಇನ್ನು ಬೆನ್ನು ತಟ್ಟಿ ಹುರಿದುಂಬಿಸಿ ಆಶೀರ್ವದಿಸಲು ಜನ ಸಿದ್ದರಿದ್ದಾರೆ; ಮತ್ತೆ ಜೊತೆಯಾಗಿ ನಿಂತು ಏನೇ ಬರಲಿ ಎದುರಿಸಲು ಸಿದ್ದರಿದ್ದೇವೆಂಬ ಬೆಂಬಲಿಗರ ಬಲವೂ ಇದೆ. ಅವರ ವಿಚಾರ, ಕನಸು-ಜನರ ಬಯಕೆ ಈಡೇರಲು ಜನಸಮೂಹ ಅವರೊಂದಿಗೆ ನಿಲ್ಲಬೇಕೆನ್ನುತ್ತಾರೆ ಅವರನ್ನು ಹತ್ತಿರದಿಂದ ಕಂಡವರು.


ನಿಜವಾದ ಜನನಾಯಕ..!!

“ನಾಯಕನಾದವನಿಗೆ ಒಂದು ಸಮರ್ಥ, ನಿರ್ದಿಷ್ಟ, ಸ್ಪಷ್ಟ , ನಿಖರವಾದ ದೃಷ್ಟಿಕೋನ ಇರುತ್ತದೆ. ನಾಯಕನಾದವನ ಕಾರ್ಯ ಕ್ಷಮತೆಯೂ ದಕ್ಷತೆಯಿಂದ ಕೂಡಿರುತ್ತದೆ. ಸಾಮಾನ್ಯ ಮಿತಿಗಳನ್ನು ಮೀರಿದ ವ್ಯಕ್ತಿತ್ವ ಹೊಂದಿದವನು ಮಾತ್ರ ನಿಜವಾದ ಜನ ನಾಯಕನಾಗುತ್ತಾನೆ ಎಂಬ ನಿಲುವು ರಜತ್ ಉಳ್ಳಾಗಡ್ಡಿ ಮಠ ಅವರದು.”


ಅಭಿವೃದ್ಧಿಪರ ಚಿಂತನೆ- ಜನಪರ ಹೋರಾಟ

ಸೇವಾ ಮನೋಭಾವ, ಅಭಿವೃದ್ಧಿಪರ ಚಿಂತನೆ ಮತ್ತು ಹೋರಾಟ ಈ ಮೂರು ಗುಣಗಳನ್ನು ಮೈಗೂಡಿಸಿಕೊಂಡಿರುವ ರಜತ ಅವರು, ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಸಮಗ್ರ ಅಭಿವೃದ್ಧಿಗೆ ಹೊಸ ದೃಷ್ಟಿಕೋನ ಕಂಡವರು.
ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡದ ಜನಸಾಮಾನ್ಯರ ಸಮಸ್ಯೆಗಳಿಗೆ ಅವರಷ್ಟು ಹೋರಾಟ ನಡೆಸಿದವರು ಮತ್ಯಾರು ಇಲ್ಲ. ರಸ್ತೆ, ಚರಂಡಿ, ಒಳಚರಂಡಿ, ಕುಡಿಯುವ ನೀರು, ಸುರಕ್ಷತೆ ಇನ್ನಿತರ ಮೂಲಭೂತ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ. ಸಂಕಷ್ಟಗಳಿಗೆ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದಾರೆ. ಸದಾ ಜನರೊಂದಿಗೆ ಇದ್ದುಕೊಂಡು ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸುತ್ತಿದ್ದಾರೆ.


ಆಶಯಗಳೇನು..!? ಹೋರಾಟಗಳೇನು..!?
• ಪ್ರಮುಖವಾಗಿ ಹುಬ್ಬಳ್ಳಿ-ಧಾರವಾಡದ ನೋವು-ನಲಿವುಗಳಿಗೆ ಸದಾ ಸ್ಪಂದಿಸುವುದು.

• ಅಭಿವೃದ್ಧಿ ಕಾಮಗಾರಿಗಳತ್ತ ಗಮನಹರಿಸುವುದು, ಗುಣಮಟ್ಟದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ; ಹೋರಾಟ

• ರೈತ ಕಾರ್ಮಿಕರ ಸಮಸ್ಯೆಗಳು ಬಂದಾಗ ಎಲ್ಲರ ಜೊತೆಗೂಡಿ ಸರ್ಕಾರಕ್ಕೆ ತಂದು ಪರಿಹಾರ ಮಾಡಿಕೊಳ್ಳುವುದು

• ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಕೊಂಡ್ಯೊಯುವುದು. ಕಾಂಗ್ರೆಸ್‌ ಪಕ್ಷದ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸುವುದು.

• ಜಾತಿ ಧರ್ಮಗಳ ಬೇಧ ಮಾಡದೆ ನೊಂದು ಬರುವ ಜನರ ಕಣ್ಣೀರು ಒರೆಸಿ ಅವರ ಮನೆ ಮಗನಂತೆ ಸೇವೆ ಮಾಡುವುದು.


ಸದಾ ನಗುಮೊಗ

ವಿದ್ಯಾರ್ಥಿ, ಯುವ ನಾಯಕ ರಜತ್‌ ಅವರದು ಸದಾ ನಗು ಮೊಗ, ಬರೀ ನಗುವಿನಲ್ಲೇ ಜನರನ್ನು ಆಕರ್ಷಿಸುವ ವ್ಯಕ್ತಿತ್ವ ಇವರದು. ಒಮ್ಮೆ ಪರಿಚಯವಾದರೆ ಮುಗಿಯಿತು. ಎಷ್ಟೇ ವರ್ಷಗಳಾದರೂ ಅವರು ಹೆಸರಿಡಿದು ಮಾತನಾಡಿಸುವ ದೊಡ್ಡ ಗುಣ ಇವರದು. ಇದು ಹುಬ್ಬಳ್ಳಿ-ಧಾರವಾಡ ಭಾಗದ ಎಲ್ಲರಿಗೂ ಸಹ ಗೊತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button