Politics

*ಈ ಹಿಂದೆ ಆತ್ಮಹತ್ಯೆ ಎಚ್ಚರಿಕೆ ನೀಡಿದ್ದೆ; ಈಗ ರಾಜೀನಾಮೆ ಕೊಟ್ಟು ಹೊರಬರುತ್ತೇನೆ: ಸ್ವಪಕ್ಷದ ಸರ್ಕಾರದ ವಿರುದ್ಧವೇ ಶಾಸಕ ಅಸಮಾಧಾನ*

ಸ್ವಪ್ರಗತಿವಾಹಿನಿ ಸುದ್ದಿ; ಪಕ್ಷದ ನಾಯಕರು, ಸರ್ಕಾರದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿರುವ ಕಾಗವಾಡ ಶಾಸಕ ರಾಜು ಕಾಗೆ, ನಾನು ವಿಧಾನಸೌಧದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆಯನ್ನೂ ಕೊಟ್ಟಿದ್ದೇನೆ ಎಂದು ಕಿಡಿಕಾರಿದ್ದಾರೆ.

ಕಾಗವಾಡದಲ್ಲಿ ಮಾತನಾಡಿದ ಶಾಸಕ ರಾಜು ಕಾಗೆ, ಆಡಳಿತ ಪಕ್ಷದಲ್ಲಿ ನಮ್ಮ ಮನವಿಗೆ ಸ್ಪಂದನೆ ಸಿಗುತ್ತಿಲ್ಲ. ಸಚಿವರುಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ನಾನು ಸಚಿವರಿಗೆ ವಿಧಾನಸೌಧದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ಕೊಟ್ಟಿದ್ದೆ ಎಂದಿದ್ದಾರೆ.

Home add -Advt

ನಮ್ಮಲ್ಲಿ ಎಷ್ಟು ಸಂಪತ್ತು ಇದೆ ಎಂಬುದು ಮುಖ್ಯವಲ್ಲ. ಮೊದಲು ರೈತರನ್ನು ಬದುಕಿಸುವ ಕೆಲಸವಾಗಬೇಕು. ಈ ಸರ್ಕಾರದಲ್ಲಿ ಯಾವುದೇಸ್ಪಂದನೆ ಸಿಗುತ್ತಿಲ್ಲ. ಇದೇ ರೀತಿ ಆದರೆ ನಾನು ರಾಜೀನಾಮೆ ಕೊಟ್ಟು ಹೊರಬರಲು ಹಿಂದೆಮುಂದೆ ನೋಡಲ್ಲ ಎಂದು ಗುಡುಗಿದ್ದಾರೆ.

ಜನರಿಗೆ ಕೊಟ್ಟ ಭರವಸೆ ಈಡೇರಿಸುವುದೇ ನಮಗೆ ಮುಖ್ಯ. ಆದರೆ ಕಾಣದ ಕೈಗಳು ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತಿವೆ ಎಂಬ ಅನುಮಾನವಿದೆ. ಸರ್ಕಾರ ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಹೀಗಾದರೆ ನಾವು ಯಾವಕಾರಣಕ್ಕೆ ಶಾಸಕರಾಗಿ ಇರಬೇಕು? ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ.

Related Articles

Back to top button