Kannada NewsKarnataka NewsLatest
*ರಿಮೋಟ್ ಗಾಗಿ ಇಬ್ಬರು ಮಕ್ಕಳ ನಡುವೆ ಜಗಳ; ತಂದೆಯ ಕೋಪಕ್ಕೆ ಬಲಿಯಾದ ಮಗ*

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಕೋಪವನ್ನು ನಿಯಂತ್ರಿಸಿಕೊಳ್ಳದಿದ್ದರೆ ಎಂತಹ ದುರಂತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆ. ಮಕ್ಕಳಿಬ್ಬರು ರಿಮೋಟ್ ಗಾಗಿ ಜಗಳವಾಡುತ್ತಿದ್ದುದನ್ನು ಕಂಡು ಸಿಟ್ಟಾದ ತಂದೆಯ ದುಡುಕಿನಿಂದಾಗಿ ಮಗನ ಪ್ರಾಣವೇ ಹೋಗಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ಈ ದುರಂತ ಸಂಭವಿಸಿದೆ. ಲಕ್ಷ್ಮಣ ಬಾಬು ಎಂಬುವವರ ಇಬ್ಬರು ಮಕ್ಕಳು ಟಿಟಿ ರಿಮೋಟ್ ಗಾಗಿ ಅಣ್ಣ-ತಮ್ಮ ಜಗಳವಾಡುತ್ತಿದ್ದರು. ಇದನ್ನು ನೋಡಿ ಕೋಪಗೊಂಡ ತಂದೆ ಲಕ್ಷ್ಮಣ ಬಾಬು ಕೈಗೆಸಿಕ್ಕ ಕತ್ತರಿಯನ್ನು ಮಕ್ಕಳ ಮೇಲೆ ಎಸೆದಿದ್ದಾನೆ. ಕತ್ತರಿ ಹೋಗಿ ಹಿರಿಯ ಮಗನ ಕತ್ತಿಗೆ ಬಿದ್ದಿದೆ.
ಕತ್ತರಿ ಬಿದ್ದ ರಭಸಕ್ಕೆ ಮಗನ ಕತ್ತಿನ ಭಾಗದಲ್ಲಿ ಕಟ್ ಆಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಮಗ ಸಾವನ್ನಪ್ಪಿದ್ದಾನೆ. 16 ವರ್ಷದ ಚಂದ್ರಶೇಖರ್ ಮೃತ ಯುವಕ. ಮೊಳಕಾಲ್ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ತಂದೆ ಲಕ್ಷ್ಮಣ ಬಾಬುರನ್ನು ಬಂಧಿಸಿದ್ದಾರೆ.




