Latest

ರಾಜಿನಾಮೆ, ರಾಜಕೀಯ ನಿವೃತ್ತಿ ಬಗ್ಗೆ ಯೋಚಿಸಿದ್ದು ನಿಜ; ರಮೇಶ್ ಜಾರಕಿಹೊಳಿ

ನಮ್ಮ ಮನೆಯಲ್ಲಿ ಸಾಕಷ್ಟು ಹುಲಿಗಳಿವೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:  ಕೆಲವರಿಂದ ನೋವಾಗಿದೆ. ಹಾಗಾಗಿ ಮನನೊಂದು ರಾಜೀನಾಮೆಗೆ ನಿರ್ಧರಿಸಿದ್ದು ನಿಜ. ಆದರೆ ಕೆಲ ಹಿರಿಯರ ಹಾಗೂ ಆಪ್ತರ ಸಲಹೆ ಮೇರೆಗೆ ಸ್ವಲ್ಪದಿನ ಕಾದು ನೋಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಸುತ್ತೂರು ಶ್ರೀಗಳ ಭೇಟಿ ಮಾಡಿ ಬಂದ ಬಳಿಕ ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ರಾಜಕೀಯದ ಬಗ್ಗೆ ಮಠದಲ್ಲಿ ಚರ್ಚೆ ನಡೆದಿಲ್ಲ. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯದಿಂದಲೇ ನಿವೃತ್ತಿಹೊಂದುವ ಬಗ್ಗೆ ಯೋಚಿಸಿದ್ದು ನಿಜ. ಆದರೆ ಕೆಲ ಹಿರಿಯರ ಸಲಹೆ ಸೂಚನೆಯಂತೆ ಕಾದು ನೋಡುವುದು ನನ್ನ ಕರ್ತವ್ಯ. ಹಾಗಾಗಿ 7-8 ದಿನ ಕಾದು ನಂತರ ಈ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದರು.

ನಾನು ನಿವೃತ್ತಿ ಪಡೆದರೂ ನಮ್ಮ ಮನೆಯಲ್ಲಿ ಸಾಕಷ್ಟು ಹುಲಿಗಳಿವೆ. ನಾನೊಬ್ಬನೇ ಅಲ್ಲ ಎಂದೂ ಅವರು ಹೇಳಿದರು.

ಸರ್ಕಾರವನ್ನು ಬೀಳಿಸಿ ಸರ್ಕಾರ ರಚಿಸುವ ಶಕ್ತಿ ನನಗಿದೆ. ಬೇರೆಯವರನ್ನು ಮಂತ್ರಿ ಮಾಡುವ ಶಕ್ತಿಯನ್ನೂ ದೇವರು ನೀಡಿದ್ದಾನೆ. ಹೀಗಿರುವಾಗ ನಾನೇಕೆ ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡಲಿ, ಲಾಬಿ  ಮಾಡುವಂತ ಸಣ್ಣ ವ್ಯಕ್ತಿ ನಾನಲ್ಲ. ನಾನು ಯಾವುದೇ ಲಾಬಿ ಮಾಡುವುದಿಲ್ಲ ಎಂದು ಅವರು ಹೇಳಿದರು.

ದೇವೇಂದ್ರ ಫಡ್ನವಿಸ್ ನನ್ನ ರಾಜಕೀಯ ಗಾಡ್ ಫಾದರ್. ಹಿಂದೆ ಸರಕಾರ ರಚಿಸುವ ಮೊದಲು ಅವರಿಗೆ ಮುಂದೆ ಹೀಗೇ ಆಗುತ್ತದೆ ಎಂದು ಹೇಳಿದ್ದೆ. ಈಗ ಏನೇನಾಗಿದೆ ಎಂದು ಮನಸ್ಸಿನಲ್ಲಿನ ನೋವನ್ನು ಹೇಳಲು ಭೇಟಿಯಾಗಿದ್ದೆ. ಒಂದು ವೇಳೆ ರಾಜೀನಾಮೆ ನೀಡಿದರೂ ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಬಿಜೆಪಿಗೆ ದ್ರೋಹಮಾಡಿ ಬೇರೆ ಪಕ್ಷಕ್ಕೆ ಹೋಗಲ್ಲ. ಕಾಂಗ್ರೆಸ್ ಯಾವತ್ತಿದ್ದರೂ ಮುಳುಗುವ ಹಡಗು. ಅಂದ ಮೇಲೆ ನಾನ್ಯಾಕೆ ಮತ್ತೆ ಕಾಂಗ್ರೆಸ್ ಗೆ ಮರಳಲಿ? ಕಾಂಗ್ರೆಸ್ ಹೋಗುವ ಪ್ರಶ್ನೆಯೇ ಇಲ್ಲ. ಅವರು ಮುಖ್ಯಮಂತ್ರಿ ಮಾಡುತ್ತೇನೆಂದರೂ ಹೋಗುವುದಿಲ್ಲ ಎಂದು ತಿಳಿಸಿದರು.

ಮುಂಬೈಯಲ್ಲೇ ತೀರ್ಮಾನ, ಮುಂಬೈಯಲ್ಲೇ ಮಾತು ಎಂದ ರಮೇಶ್ ಜಾರಕಿಹೊಳಿ
ಸಿಎಂ ಸ್ಥಾನಕ್ಕೆ 6 ನಾಯಕರು ಟವೆಲ್ ಹಾಕಿದ್ದಾರೆ; ಆರ್.ಅಶೋಕ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button