ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪೇಟಿಎಂ ಪೇಮೆಂಟ್ ಬ್ಯಾಂಕ್ ಗೆ ಆರ್ ಬಿ ಐ ನಿರ್ಬಂಧ ವಿಧಿಸಿದ್ದು, ಇನ್ಮುಂದೆ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳದಂತೆ ಸೂಚನೆ ನೀಡಿದೆ.
ಆನ್ ಲೈನ್ ವ್ಯವಹಾರಕ್ಕೆ ಬಳಕೆಯಲ್ಲಿರುವ ಪೇಟಿಂ ಬ್ಯಾಂಕ್ 2017ರಲ್ಲಿ ಕಾರ್ಯಾರಂಭವಾಗಿತ್ತು. ಆದರೆ ಸಧ್ಯಕ್ಕೆ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳದಂತೆ ಆರ್ ಬಿಐ ನಿರ್ದೇಶನ ನೀಡಿದೆ.
ಪೇಟಿಎಂ ಐಟಿ ಸಿಸ್ಟಂ ನ್ನು ಆಡಿಟ್ ಗೆ ಒಳಪಡಿಸುವಂತೆ ಆರ್ ಬಿಐ ಸೂಚಿಸಿದೆ. ಆಡಿಟ್ ಗಳ ವರದಿ ಬಳಿಕ ಆರ್ ಬಿ ಐ ನಿಂದ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
1949ರ ಬ್ಯಾಂಕಿಂಗ್ ರೆಗ್ಯೂಲೇಷನ್ ಆಕ್ಟ್ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್ ಬಿಐ ತಿಳಿಸಿದೆ.
ಪರಿಷತ್ ಸಭಾಪತಿ ಹೊರಟ್ಟಿ ವಿರುದ್ಧ FIR; ಇನ್ಸ್ ಪೆಕ್ಟರ್ ಸಸ್ಪೆಂಡ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ