Belagavi NewsBelgaum NewsKannada NewsKarnataka NewsLatestPolitics

*ಕೆಎಲ್‌ಇ ಆಸ್ಪತ್ರೆ ಸಂಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಬ್ಲಡ್‌ ಬ್ಯಾಂಕ್ ಹಾಗೂ ನಗರದ ಶ್ರೀ ಬನಶಂಕರಿ ಶಿಕ್ಷಣ ಸಂಸ್ಥೆಯ ಶ್ರೀ ತಾತ್ಯಾಸಾಹೇಬ ವಿದ್ಯಾಲಯ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

ಕಿಶೋರ್ ಮುಸಳೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಲಾದ ರಕ್ತದಾನ ಶಿಬಿರವನ್ನು ಕೆಎಲ್ಇ ಸಂಸಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ರಕ್ತ ಭಂಡಾರ ಮುಖ್ಯಸ್ಥರಾದ ಎಸ್‌ ವಿ ವೀರಗಿ ಅವರು ಉದ್ಘಾಟಿಸಿದರು. 

Home add -Advt

ದಾನಿಗಳು ಮಾಡಿದ ರಕ್ತದಾನದ ಪ್ರತಿಯೊಂದು ಹನಿಯೂ ಕೂಡ  ಜೀವಗಳನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿದೆ. ತುರ್ತುಪರಿಸ್ಥಿತಿ, ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಬಹಳವಿರುತ್ತದೆ. ಆದ್ದರಿಂದ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕೆಂದು ಕರೆ ನೀಡಿದರು.

ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಶಿಲ್ಪಾ ಗಾಡಗೆ ಅವರು ಮಾತನಾಡಿದರು. 

ಸುಮಾರು 50ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು. ಶಿಬಿರದಲ್ಲಿ ಶಾಲೆಯ ಅಧ್ಯಕ್ಷರಾದ ನಾರಾಯಣ ಕಾಮಕರ ಉಪಾಧ್ಯಕ್ಷರಾದ ವಾಸುದೇವ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಸಮಾಜ ಸೇವಕರಾದ ಶಿವರಾಜ್ ಪಾಟೀಲ ಸೇರಿದಂತೆ ಮೂಂತಾದವರು ಉಪಸ್ಥಿತರಿದ್ದರು.

Related Articles

Back to top button