Belagavi NewsBelgaum NewsKannada NewsKarnataka News

*ಬೆಳಗಾವಿಯಲ್ಲಿ ಕಾರಿನ ಮೇಲೆ ಉರುಳಿದ ಬೃಹತ್ ಮರ*

ಪ್ರಗತಿವಾಹಿನಿ ಸುದ್ದಿ: ಶುಕ್ರವಾರ ಬೆಳಗಾವಿಯಲ್ಲಿ ಸುರಿದ ಭಾರಿ ಮಳೆಗೆ ಅನಗೋಳದ ಸಂತ್ ಮೀರಾ ಶಾಲೆಯ ಎದುರುಗಡೆ ಬೃಹತ್ ಗಾತ್ರದ ಮರ ಓಮಿನಿ ಕಾರಿನ ಮೇಲೆ ಉರುಳಿದ ಪರಿಣಾಮ ಓಮಿನಿ ಕಾರು ಸಂಪೂರ್ಣ ಜಖಂ ಆಗಿದೆ. 

ಶುಕ್ರವಾರ ಸಾಯಂಕಾಲ 4:30 ಗಂಟೆಯಿಂದ ಸುಮಾರು 5:30 ಗಂಟೆ ವರೆಗೆ ಸುರಿದ ಆಲಿಕಲ್ಲು ಸಹಿತ ಮಳೆಗೆ ಬೆಳಗಾವಿ ನಗರ ಸೇರಿದಂತೆ ಅನೇಕ ಕಡೆ ವಿದ್ಯುತ್ ಕಂಬಗಳು ಧರೆಗುರುಳಿದೆ. ಹಲವು ಕಡೆ ಶೆಡ್ ಗಳು ಹಾರಿ ಹೋಗಿವೆ. ಬೆಳಗಾವಿಯ ಫೊರ್ಟ್ ರೋಡ್, ಗಾಂಧಿ ನಗರ ಸೇರಿದಂತೆ ಅನೇಕ ಕಡೆ ರಸ್ತೆಗಳೆಲ್ಲ ಜಲಾವೃತವಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು.‌

Home add -Advt

ಬೆಳಗಾವಿಯ ಅನಗೋಳದಲ್ಲಿ ಇರುವ ಸಂತ್ ಮೀರಾ ಶಾಲೆ ಎದುರುಗಡೆ ಇರುವ ರಸ್ತೆ ಪಕ್ಕದಲ್ಲಿ ನಿಂತಿದ್ದ ಓಮಿನಿ ಕಾರಿನ ಮೇಲೆ ಬೃಹತ್ ಮರ ಉರಳಿ ಬಿದಿದ್ದು, ಕಾರು ಸಂಪುರ್ಣ ಜಖಂ ಆಗಿದೆ. ಈ ಘಟನೆಯಲ್ಲಿ ಯಾವುದೆ ಸಾವು ನೋವು ಸಂಭವಿಸಿಲ್ಲ. ಆದರೆ ರಸ್ತೆ ಪಕ್ಕದಲ್ಲೆ ಕಾರಿನ ಮೇಲೆ ಮರ ಉರುಳಿದ್ದರಿಂದ ಕೆಲ ಕಾಲ ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಇಂದು ಕೂಡ ಬೆಳಗಾವಿ ಸೇರಿದಂತೆ ಅನೇಕ ಕಡೆ ಮಳೆ ಆಗುವ ನೀರಿಕ್ಷೆ ಇದೆ.

Related Articles

Back to top button