ಶಾಲಾ ಕಟ್ಟಡಗಳ ಮರುನಿರ್ಮಾಣ: ಪೂಜೆ ನೆರವೇರಿಸಿದ ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ತುಮ್ಮರಗುದ್ದಿ, ಸೋಮನಟ್ಟಿ ಹಾಗೂ ಅರಳೀಕಟ್ಟಿ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಗಳ ಮರು ನಿರ್ಮಾಣ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶನಿವಾರ ಪೂಜೆ ನೆರವೇರಿಸಿದರು.
ಮಳೆಯಿಂದ ಶಾಲಾ ಕಟ್ಟಡಗಳು ಹಾನಿಗೊಳಗಾಗಿದ್ದು, ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಮರು ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಶನಿವಾರ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಚನ್ನರಾಜ ಹಟ್ಟಿಹೊಳಿ, ಗ್ರಾಮೀಣ ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲು ಸಮಗ್ರ ಯೋಜನೆಯೊಂದನ್ನು ಹಾಕಿಕೊಳ್ಳಲಾಗುವುದು. ಈ ಕುರಿತು ಎಲ್ಲರ ಸಲಹೆ, ಸಹಕಾರ ಪಡೆಯಲಾಗುವುದು. ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಹಿರಿಯರು, ಶೇಖರ ಹೊಸೂರಿ, ಕಲ್ಲಪ್ಪ ಶಿಣಗಿ, ಕಲ್ಮೇಶ್ ಮಳಗಲಿ, ಶಿವಶಂಕರ ಪಾಟೀಲ, ಶಿವಾಜಿ ತಳವಾರ, ಶೇಖರ ಶಿಣಗಿ, ನಾಗರಾಜ ಹುಂಕಳಿ, ಲಕ್ಷ್ಮಣ ಕೆಂಪದಿನ್ನಿ, ಬಾಳಪ್ಪ ಯದ್ದಲಗುಡ್ಡ, ಮಂಜುನಾಥ ತೋಟಗಿ, ಬಾಳಪ್ಪ ಬಸರಿಮರದ್, ಹೊಳೆಪ್ಪ ನಂದ್ಯಾಗೋಳ, ಬಾಳಪ್ಪ ಮಾಸ್ತಮರ್ಡಿ, ಮಲ್ಲೇಶ್ ಪೂಜೇರಿ, ಟೋಪಣ್ಣ, ಕಲ್ಲಪ್ಪ ಯದ್ದಲಗುಡ್ಡ, ಸಣ್ಣರಾಯಪ್ಪ, ನಿಂಗಪ್ಪ ಬಾಗೇವಾಡಿ, ಸಿದ್ದಣ್ಣ ಸಿಂಗಾಡಿ, ರಾಜು ಉಪ್ಪಾರ, ನಾಗರಾಜ ಕರಲಿಂಗನವರ, ರಮೇಶ ತಿಗಡಿ, ಗುರಪ್ಪ ಹೆಬ್ಬಾಳ್ಕರ್, ಚಂಬಣ್ಣ ಉಳ್ಳಾಗಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ದಾಸಪ್ಪಗೋಳ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ