Belagavi NewsBelgaum NewsKannada NewsKarnataka News

ಯಲ್ಲಮ್ಮ ದೇವಸ್ಥಾನಕ್ಕೆ ದಾಖಲೆಯ ಕಾಣಿಕೆ ಸಂಗ್ರಹ: ಹುಂಡಿಯಲ್ಲಿ ವಿದೇಶಿ ನೋಟುಗಳು ಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಕ್ಷಿಣ ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ದಾಖಲೆಯ ಕಾಣಿಕೆ ಹಣ ಹಾಗು ಚಿನ್ನ ಸಂಗ್ರಹವಾಗಿದೆ.‌ ಬರದ ಬವಣೆ ಮಧ್ಯೆಯೂ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭರಪೂರ ಕಾಣಿಕೆ ಹರಿದು ಬಂದಿದ್ದು, ಒಂದೇ ವರ್ಷದಲ್ಲಿ ಎರಡು ಕೋಟಿಗೂ ಅಧಿಕ ಕಾಣಿಕೆ ಹೆಚ್ಚಳವಾಗಿದೆ.‌

ದೇಶದ ನಾನಾ ಭಾಗದಿಂದ ಬಂದಿದ್ದ ಭಕ್ತರಿಂದ ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೇವಸ್ಥಾನದ ಹುಂಡಿಯಲ್ಲಿ ಹಾಕಿ ಭಕ್ತಿ ಸಮರ್ಪಣೆ ಮಾಡಿದ್ದಾರೆ.‌ 2023–24ರಲ್ಲಿ ₹11.23 ಕೋಟಿ ಕಾಣಿಕೆ ಸಂಗ್ರಹವಾಗಿದೆ.‌

ಕಳೆದ ವರ್ಷಕ್ಕೆ ಹೋಲಿಸಿದರರೆ 2ಕೋಟಿ 40ಲಕ್ಷ ಹೆಚ್ಚಿಗೆ ಕಾಣಿಕೆ ಸಂಗ್ರಹವಾಗಿದೆ.‌

2022–23ರಲ್ಲಿ 8.01ಕೋಟಿ ನಗದು, 66.28ಲಕ್ಷ ಮೌಲ್ಯದ ಚಿನ್ನ ಮತ್ತು 15.43 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸೇರಿ 8.83 ಕೋಟಿಯ ಕಾಣಿಕೆ ಸಂಗ್ರಹವಾದರೆ,

2023–24ರಲ್ಲಿ 10.22ಕೋಟಿ ನಗದು, 84.14ಲಕ್ಷ ಚಿನ್ನ ಮತ್ತು 16.65ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಸೇರಿ 11.23ಕೋಟಿ ಕಾಣಿಕೆ ಸಂಗ್ರಹವಾಗಿದೆ.‌ ಹುಂಡಿ ಎಣಿಕೆ ವೇಳೆ ಕೆನಡಾ ದೇಶದ ಎರಡು ಕರೆನ್ಸಿ ನೋಟುಗಳು ಕೂಡಾ ಪತ್ತೆ ಆಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button