
ಪ್ರಗತಿವಾಹಿನಿ ಸುದ್ದಿ; ಧಾರವಾಡ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರ ರೀಲ್ಸ್ ಅವಘಡಗಳು ಹೆಚ್ಚುತ್ತಿವೆ. ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ಬೈಕ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ದುಸ್ಸಾಹಸದ ವಿಡಿಯೋ, ಫೋಟೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಹೆಚ್ಚಿನ ಫಾಲೋವರ್ಸ್ ಗಳಿಸಬೇಕು ಎಂಬ ಕಾರಣಕ್ಕೆ ಅಪಾಯವನ್ನೂ ಲೆಕ್ಕಿಸದೇ ಸಾಹಸ ಮಾಡಲು ಹೋಗಿ ಪ್ರಾಣಾಪಾಯವನ್ನು ತಂದುಕೊಳ್ಳುವವರೇ ಹೆಚ್ಚು.
ಸಮೀರ್ ಎಂಬ ಯುವಕ ರೀಲ್ಸ್ ಮಾಡಲು ಹೋಗಿ ಬೈಕ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಗಾಯಾಳುವನ್ನು ನರಗುಂದ ಪಟ್ಟಣದ ನಿವಾಸಿ.
ಅಣ್ಣಿಗೇರಿ ರಸ್ತೆಯಲ್ಲಿ ಬೈಕ್ ಓಡಿಸುತ್ತಾ ಬೈಕ್ ಮೇಲೆ ಎದ್ದು ನಿಂತು ರೀಲ್ಸ್ ಮಾಡುವಾಗ ಬೈಕ್ ನಿಂದ ಬಿದ್ದು ಗಾಯಗೊಂಡಿದ್ದು, ಗಾಯಾಳುವನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ