Kannada NewsKarnataka NewsLatest
ಸಮಾಜ ಸರಿಯಾದ ದಿಕ್ಕಿನಲ್ಲಿ ಸಾಗಲು ಧಾರ್ಮಿಕ ಸಂಸ್ಥೆಗಳು ಅಗತ್ಯ – ಚನ್ನರಾಜ ಹಟ್ಟಿಹೊಳಿ

ಮಾಸ್ತಮರ್ಡಿ ಗ್ರಾಮದ ಶ್ರೀ ಕೃಷ್ಣ ದೇವಸ್ಥಾನದ ಕಟ್ಟಡದ ಕಾಮಗಾರಿಗೆ ಶಾಸಕರ ನಿಧಿಯ ಚೆಕ್ ಹಸ್ತಾಂತರ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಮಾಜ ಸರಿಯಾದ ದಿಕ್ಕಿನಲ್ಲಿ ಸಾಗಲು ದೇವಸ್ಥಾನದಂತಹ ಧಾರ್ಮಿಕ ಸಂಸ್ಥೆಗಳು ಅಗತ್ಯ ಎಂದು ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ, ಕಾಂಗ್ರೆಸ್ ನಾಯಕ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.

ದೇವಸ್ಥಾನಗಳು ಶಾಂತಿ ಮತ್ತು ಸಂಸ್ಕ್ರತಿಯ ಪ್ರತೀಕವಾಗಿದ್ದು, ಮನಶಾಂತಿ, ಆಧ್ಯಾತ್ಮಿಕ ಉನ್ನತಿ ಹಾಗೂ ಧರ್ಮಶಿಕ್ಷಣಕ್ಕೆ ದಾರಿಯನ್ನು ತೋರಿಸಿಕೊಡುತ್ತವೆ, ಮನುಷ್ಯ ಸಮಾಜ ಜೀವಿಯಾಗಿ ಧರ್ಮ, ಸಂಸ್ಕೃತಿ, ಪರಂಪರೆ ಇತ್ಯಾದಿ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಬದುಕು ಸಾರ್ಥಕತೆಯನ್ನು ಹೊಂದುತ್ತದೆ. ಯುವಕರು ಸರಿಯಾದ ದಿಕ್ಕಿನಲ್ಲಿ ಹೋಗುವಂತೆ ಹಿರಿಯರು ಮಾಡಬೇಕು. ಗ್ರಾಮದಲ್ಲಿ ದೇವಸ್ಥಾನದಂತಹ ಧಾರ್ಮಿಕ ಸಂಸ್ಥೆಗಳಿದ್ದಾಗ ಎಲ್ಲವೂ ಸರಿಯಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಗಂಗಣ್ಣ ಕಲ್ಲೂರ, ಚನ್ನರಾಜ ಹಟ್ಟಿಹೊಳಿ ಹಾಗೂ ಕಾರ್ಯಕರ್ತರೆಲ್ಲರೂ ಸೇರಿ ದೇವಸ್ಥಾನದ ಕಮೀಟಿಯವರಿಗೆ ಚೆಕ್ ಹಸ್ತಾಂತರಿಸಿದರು.
ಚೆಕ್ ವಿತರಿಸುವ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಅಶೋಕ ತೋರ್ಲಿ, ಮಾರುತಿ ಜಿಂಗಳಿ, ಯಲ್ಲಪ್ಪ ತೋರ್ಲಿ, ಸುನಂದ ಮರಕಟ್ಟಿ, ಸಾಗರ ಕುರಂಜಿ, ಸವಿತಾ ಪಾರಿಶ್ವಾಡ, ಸುಶೀಲಾ ಜಂಗ್ಲಿ, ದೇವಸ್ಥಾನದ ಕಮೀಟಿಯವರು, ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ