Latest

ನವೀನ್ ನಿಧನಕ್ಕೆ ಭಾವುಕರಾದ ಸಿಎಂ ಬೊಮ್ಮಾಯಿ; ಮತ್ತೋರ್ವ ವಿದ್ಯಾರ್ಥಿಗೂ ಗಾಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ರಾಜ್ಯದ ವಿದ್ಯಾರ್ಥಿ ನವೀನ್ ಸಾವಿಗೆ ಸಂತಾಪ ಸೂಚಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ನನ್ನದೇ ಜಿಲ್ಲೆಯ ವಿದ್ಯಾರ್ಥಿ ಸಾವು ನೋವು ತಂದಿದೆ ಎಂದು ಭಾವುಕರಾಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ನನ್ನದೇ ಊರಿನ ವಿದ್ಯಾರ್ಥಿ ನವೀನ್ ನನ್ನು ಕಳೆದುಕೊಂಡಿದ್ದೇನೆ. ಆತನ ಜತೆಗಿದ್ದ ಹಾವೇರಿಯ ಮತ್ತೋರ್ವ ವಿದ್ಯಾರ್ಥಿ ಕೂಡ ಗಾಯಗೊಂಡಿದ್ದಾನೆ. ಈ ವಿಚಾರ ತುಂಬಾ ನೋವು ತಂದಿದೆ ಎಂದು ಕಂಬನಿ ಮಿಡಿದಿದ್ದಾರೆ.

Home add -Advt

ನವೀನ್ ಕಳೆದ ಒಂದು ವಾರದಿಂದ ಬಂಕರ್ ನಲ್ಲಿದ್ದರು. ಇಂದು ಹೊರಗೆ ಹೋದಾಗ ವಾಯುದಾಳಿಗೆ ಬಲಿಯಾಗಿದ್ದಾರೆ. ಅವರದ್ದೇ ಗ್ರಾಮದ ಮತೋರ್ವ ವಿದ್ಯಾರ್ಥಿ ಕೂಡ ಗಾಯಗೊಂಡಿದ್ದಾರೆ. ನವೀನ್ ಮೃತದೇಹ ವಾಪಸ್ ಪಡೆಯುವ ಬಗ್ಗೆ ಚರ್ಚೆ ನಡೆದಿದೆ. ನವೀನ್ ಕುಟುಂಬದ ಜತೆ ಪ್ರಧಾನಿ ಮೋದಿ ಕೂಡ ಚರ್ಚೆ ನಡೆಸಿದ್ದಾರೆ. ಉಕ್ರೇನ್ ನಲ್ಲಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳನ್ನು ಕರೆತರುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು

ರಷ್ಯಾ ಕ್ಷಿಪಣಿ ದಾಳಿಗೆ ರಾಜ್ಯದ ವಿದ್ಯಾರ್ಥಿ ಬಲಿ; ಪೋಷಕರಿಗೆ ಸಾಂತ್ವನ ಹೇಳಿದ CM

Related Articles

Back to top button