*ಒಳಮೀಸಲಾತಿ ವಿರೋಧಿಸಿ ರಾಜ್ಯಾದ್ಯಂತ ಬೃಹತ್ ಹೋರಾಟ: ಮಂಜುನಾಥ ಪಮ್ಮಾರ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿ ಖಂಡಿಸಿ ಇದೇ ಸೆ.4 ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಿದ್ದೇವೆ. ಹಾಗೂ ಸೆ. 10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದು ರಾಷ್ಟ್ರೀಯ ಗೋರ ಮೇಳಾವ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಮಂಜುನಾಥ ಪಮ್ಮಾರ ಹೇಳಿದರು.
ಇಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತಿ ಮೀಸಲಾತಿ ಅವೈಜ್ಞಾನಿಕ ವರ್ಗೀಕರಣ ಖಂಡಿಸಿ ಬೃಹತ್ ಹೋರಾಟ ನಡೆಯಲಿದೆ. ಬಂಜಾರಾ, ಭೋವಿ, ಕೊರಚ, ಕೊರವ, ಸಮಾಜದಿಂದ ಬೃಹತ್ ಸಮಾವೇಶ ನಡೆಯಲಿದೆ. ಒಳಮೀಸಲಾತಿಯಲ್ಲಿ ದೋಷವಾಗಿದೆ. ದೊಷಪೂರಿತ ದತ್ತಾಂಶ ಪರಿಗಣಿಸಿ ಜಾತಿ ಮೀಸಲಾತಿ ಅವೈಜ್ಞಾನಿಕವಾಗಿ ವರ್ಗೀಕರಿಸಲಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ಬಂಜಾರಾ, ಕೊರಮ, ಭೋವಿ, ಕೊರಚ ಸಮಾಜಗಳಿಗೆ 4.5 ರಷ್ಟು ಮೀಸಲಾತಿ ಘೊಷಣೆ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಒಟ್ಟು 63 ಸಮುದಾಗಳನ್ನು ಸೇರಿಸಿ 5 ಪರ್ಸಂಟ್ ಮೀಸಲಾತಿ ಘೋಷಣೆ ಮಾಡಿದೆ. ಇದು ಘೋರವಾದ ಅನ್ಯಾಯ. ಮೀಸಲಾತಿ ವರ್ಗೀಕರಣ ಕುರಿತು ಸುಪ್ರಿಂ ಕೋರ್ಟ್ ಆದೇಶದಂತೆ ಸೂಕ್ತ ಮಾನದಂಡಗಳನ್ನು ರೂಪಿಸಬೇಕು. ಜಾತಿವಾರು ಸ್ಥಿತಿಗತಿಗಳನ್ನು ಸಮೀಕ್ಷೆ ಹಾಗೂ ಗಣತಿ ನಡೆಸಬೇಕು.
ಇದೇ ನಾಲ್ಕನೇ ತಾರೀಕಿನಂದು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಲಿದ್ದೆವೆ. ಅಲ್ಲದೆ ಹತ್ತನೇ ತಾರೀಕಿನಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲಿದ್ದೆವೆ. ಸಹೋದರ ಸಮುದಾಯಗಳ ಓಲೈಕೆಗೆ ಸಿದ್ದರಾಮಯ್ಯ ಸರ್ಕಾರ ಹೀಗೆ ಮಾಡಿದೆ.
ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ಮಾಡುತ್ತೆವೆ ಎಂದು ಹೇಳಿದರು.
ಈ ವೇಳೆ ಭೋವಿ ಸಮಾಜದ ಮುಖಂಡ ಸುನೀಲ ಧೊತರೆ, ಬೆಳಗಾವಿ ಮಹಾನಗರ ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಕಾಶ ರಾಠೋಡ, ಬಂಜಾರ ಸಮಾಜದ ಮುಖಂಡರಾದ ಎಂ ಟಿ ರಾಠೋಡ್, ಬಿಪಿ ಲಮಾಣಿ, ದೆವೇಂದ್ರ ನಾಯಕ, ಸುರೇಶ್ ಲಮಾಣಿ, ರಾಜು ರಾಠೋಡ್, ಅನೀಲ್ ರಾಠೋಡ್, ಗೋವಿಂದ ಲಮಾಣಿ ಲೋಕೇಶ ರಾಠೋಡ್, ಶಿವನಂದ ಚವ್ಹಾನ, ರವಿ ಲಮಾಣಿ ಇದ್ದರು.