ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಯುಎಸ್ ನ ಖ್ಯಾತ ಗಾಯಕ, ಗೀತೆ ರಚನಾಕಾರ ರಿಕಿ ಮಾರ್ಟಿನ್ ಈಗ ಲೈಂಗಿಕ ಕಿರುಕುಳದ ಆರೋಪಿ.
ಅವರ ವಿರುದ್ಧ ದೂರು ದಾಖಲಿಸಿದವರು ಬೇರೆ ಯಾರೂ ಅಲ್ಲ, ಸ್ವತಃ ಅವರ ಸೋದರಿಯ ಪುತ್ರಿಯೇ ಅವರಿಗೆ ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸಿದ್ದಾರೆ.
21 ವರ್ಷದ ಸೊಸೆ ಈ ಹಿಂದೆಯೂ ಅವರ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಎಸಗಿದ್ದರು. ಆದರೆ ಇದೀಗ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ರಿಕಿ ಅದನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಇದರ ಬೆನ್ನಿಗೇ ಅವರು ಪ್ರತಿಕ್ರಿಯಿಸಿ ಸೊಸೆಯೊಂದಿಗೆ ತಾವು ರೋಮ್ಯಾಂಟಿಕ್ ಸಂಬಂಧವಷ್ಟೇ ಹೊಂದಿದ್ದು ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ. ಈ ಆರೋಪ ಸತ್ಯಕ್ಕೆ ದೂರವಾಗಿದ್ದು ಇದೊಂದು ಅಸಹ್ಯಕರ ಆರೋಪವಾಗಿದೆ ಎಂದು ರಿಕಿ ಪರ ವಕೀಲರು ಹೇಳಿದ್ದಾರೆ.
ಕೊರೊನಾ ಲಸಿಕೆ ಅಮೃತ ಮಹೋತ್ಸವ ಅಭಿಯಾನಕ್ಕೆ ಚಾಲನೆ: 75 ದಿನ ಉಚಿತ ಮುನ್ನೆಚ್ಚರಿಕಾ ಡೋಸ್ ವ್ಯಾಕ್ಸಿನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ