
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಿವರಾತ್ರಿ ನಿಮಿತ್ತ ಬೆಳಗಾವಿಯಲ್ಲಿ ಗುರುವಾರ ಘೋಷ ಪಥಸಂಚಲನ ನಡೆಸಿತು.
ರಾತ್ರಿ 8 ಗಂಟೆಗೆ ಆರಂಭವಾದ ಪಥ ಸಂಚಲನದಲ್ಲಿ ನೂರಾರು ಸ್ವಯಂ ಸೇವಕರು ಭಾಗವಹಿಸಿದ್ದರು.
ನಗರದ ಚನ್ನಮ್ಮ ನಗರದ ಲಕ್ಷ್ಮಿ ಟೆಂಪಲ್ ನಿಂದ ಆರಂಭವಾದ ಪಥ ಸಂಚಲನ ಟಿಳಕವಾಡಿ ಮೂಲಕ ಮಂಡೋಳಿ ರಸ್ತೆಯ ಗಣೇಶ ಮಂದಿರದವರೆಗೆ ನಡೆಯಿತು.

ಪಥಸಂಚಲನದ ಮಾರ್ಗದಲ್ಲಿ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ನಿಂತು ವೀಕ್ಷಿಸುತ್ತಿದ್ದರು. ಹಲವೆಡೆ ರಸ್ತೆಗಳಲ್ಲಿ ರಂಗವಲ್ಲಿ ಹಾಕಿ ಜನರು ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ