Kannada NewsLatest

ಎಸ್ ಜಿ ಬಾಳೇಕುಂದ್ರಿ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ಮತ್ತು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು: ತೋಂಟದ ಸಿದ್ಧರಾಮ ಶ್ರೀಗಳು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನೀರಾವರಿ ತಜ್ಞ ದಿವಂಗತ ಎಸ್ ಜಿ ಬಾಳೆಕುಂದ್ರಿ ಅವರಿಗೆ ಕರ್ನಾಟಕ ಸರ್ಕಾರವು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಬೇಕು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬಾಳೇಕುಂದ್ರಿ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಗದುಗಿನ ತೋಂಟದಾರ್ಯ ಮಠದ ಡಾ ತೋಂಟದ ಸಿದ್ಧರಾಮ ಸ್ವಾಮೀಜಿ ಅವರು ಸರಕಾರವನ್ನು ಒತ್ತಾಯಿಸಿದರು.

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಎಸ್ ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಾತನಾಡಿದ ಅವರು ಅಮ್ಮನ ಎಸ್ ಜಿ ಬಾಳೇಕುಂದ್ರಿ ಅವರ ಜನ್ಮಶತಮಾನೋತ್ಸವ ವರ್ಷಾಚರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು .

ಕರ್ನಾಟಕಕ್ಕೆ ಬಾಳೆಕುಂದ್ರಿ ಅವರ ಕೊಡುಗೆ ಅಪಾರ ಇಂದು ಸಮೃದ್ಧ ಕರ್ನಾಟಕ ನಿರ್ಮಾಣವಾಗಿದ್ದರೆ ಅದಕ್ಕೆ ಬಾಳೆಕುಂದ್ರಿ ಅವರ ದೂರದೃಷ್ಟಿಯ ಯೋಜನೆಗಳೇ ಕಾರಣ, ಕತ್ತಲಲ್ಲಿದ್ದ ಕರ್ನಾಟಕ ಇಂದು ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಹೊಂದಿದ್ದರೆ ಅದಕ್ಕೆ ಅಂದು ಬಾಳೆಕುಂದ್ರಿ ಅವರು ರೂಪಿಸಿ ಅನುಷ್ಠಾನಕ್ಕೆ ತಂದ
ನೀರಾವರಿ ಯೋಜನೆಗಳು ಮತ್ತು ವಿದ್ಯುತ್ ಉತ್ಪಾದನೆ ಯೋಜನೆಗಳು ಕಾರಣ ಎಂದು ಹೇಳಿದ ಶ್ರೀಗಳು ಬರಗಾಲ ಪೀಡಿತ ಉತ್ತರ ಕರ್ನಾಟಕದಲ್ಲಿ ಬೇಸಿಗೆ ಕಾಲ ಮತ್ತು ಬರಗಾಲ ಎಂದು ಹೇಳುತ್ತಿದ್ದ ಕಾಲದಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸಿ ಮಿತವ್ಯಯದಲ್ಲಿ ಅವನ್ನು ಅನುಷ್ಠಾನಗೊಳಿಸಿ ಲಕ್ಷಾಂತರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ದೊರಕುವಂತೆ ಆಗಿ ಕೋಟ್ಯಾಂತರ ರೈತರ ಬದುಕು ಸಮೃದ್ಧ ಮಾಡಿದ ಶ್ರೇಯಸ್ಸು ಬಾಳೆಕುಂದ್ರಿ ಅವರಿಗೆ
ಸಲ್ಲುತ್ತದೆ ಎಂದು ಶ್ರೀಗಳು ಹೇಳಿದರು.

ಕಾವೇರಿ ಯೋಜನೆಯೊಂದನ್ನು ಹೊರತುಪಡಿಸಿದರೆ ರಾಜ್ಯದಲ್ಲಿನ ಬಹುತೇಕ ನೀರಾವರಿ ಯೋಜನೆಗಳನ್ನು ರೂಪಿಸಿದ್ದು ಅಷ್ಟೇ ಅಲ್ಲ ಅವನ್ನೆಲ್ಲ ರಲ್ಲಿ
ಅನುಷ್ಠಾನಗೊಳಿಸಿದ್ದು ಬಾಳೆಕುಂದ್ರಿ ಅವರ ಸಾಧನೆ ಮಹದಾಯಿ ನದಿಯ ನೀರನ್ನು ಮಲಪ್ರಭಾ ನದಿಗೆ ಹರಿಸಿ ಅದರ ಲಾಭ ಈ ಭಾಗದ ಜನಕ್ಕೆ ದೊರಕಬೇಕು ಎಂದು ಆ ಕಾಲದಲ್ಲೇ ಬಾಳೇಕುಂದ್ರಿ ಹೇಳಿದರು ಆದರೆ ರಾಜಕೀಯ ಕಾರಣಗಳಿಗಾಗಿ ಮತ್ತು ಇಚ್ಛಾಶಕ್ತಿಯ ಕೊರತೆಯ ಕಾರಣದಿಂದಾಗಿ
ಇಂದಿಗೂ ಸಮಸ್ಯೆ ಪರಿಹಾರವಾಗಿಲ್ಲ ಎಂದರು.

ಮುಂಬೈ ಮತ್ತು ಬೆಂಗಳೂರಿನ ಮಧ್ಯದಲ್ಲಿರುವ ಬೆಳಗಾವಿಯಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಆಗಬೇಕು ಎನ್ನುವ ಕಾರಣಕ್ಕಾಗಿ 1998 ರಲ್ಲಿ ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು .ಕೆಎಲ್ಇ ಸಂಸ್ಥೆಯ ಆವರಣದಲ್ಲಿ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಪ್ರಾರಂಭವಾದರೆ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯಆವರಣದಲ್ಲಿ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿ ಕಾರ್ಯಾರಂಭ ಮಾಡಿದೆ ಹೀಗೆ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿ ಸ್ಥಾಪನೆಯಾಗಿ ವ್ಯವಸ್ಥಿತ ರೀತಿಯಲ್ಲಿಕಾರ್ಯ ನಿರ್ವಹಣೆ ಮಾಡಲು ಈ ಎರಡೂ ಸಂಸ್ಥೆಗಳು ತಮ್ಮ ವಂತಿಗೆಯನ್ನು ಸಲ್ಲಿಸಿವೆ ಎಂದು ಶ್ರೀಗಳು ನುಡಿದರು.

ನಾಗನೂರು ರುದ್ರಾಕ್ಷಿಮಠ ದೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದ್ದ ಎಸ್ ಜಿ ಬಾಳೇಕುಂದ್ರಿ ಅವರು ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭವಾಗಲು ಕಾರಣಕರ್ತರಾದರು.ಆರಂಭದಲ್ಲಿ ಆರ್ ಎನ್ ಶೆಟ್ಟಿ ಅವರಿಗೆ ಹೇಳಿ ಪಾಲಿಟೆಕ್ನಿಕ್ ಕಾಲೇಜಿಗೆ ಸಹಾಯ ಮಾಡುವಂತೆ ಹೇಳಿದಾಗ ಆರ್ಎನ್ಶೆಟ್ಟಿ ಹೆಸರಿನಲ್ಲಿಯೇ ಪಾಲಿಟೆಕ್ನಿಕ್ ಕಾಲೇಜು ಆರಂಭವಾಯಿತು .ಎಂದು ಶ್ರೀಗಳು ನೆನಪಿಸಿಕೊಂಡರು ಎಸ್ ಜಿ ಬಾಳೇಕುಂದ್ರಿ ಅವರ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಸಮಾರೋಪ ಸಮಾರಂಭಕ್ಕೆ ರಾಷ್ಟ್ರಪತಿಗಳು ಅಥವಾ ಉಪರಾಷ್ಟ್ರಪತಿಗಳನ್ನು ಆಹ್ವಾನಿಸುವ ವಿಚಾರ ಹೊಂದಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಅಖಿಲ ಭಾರತ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಡಾ ಅನಿಲ್ ಸಹಸ್ರಬುದ್ಧೆ ಅವರು ಮಾತನಾಡಿ ಎಸ್ ಜಿ ಬಾಳೇಕುಂದ್ರಿ ಅವರು ಕರ್ನಾಟಕಕ್ಕೆ ಮಾತ್ರವಲ್ಲ ಮಹಾರಾಷ್ಟ್ರ ವಿಶೇಷವಾದ ಕೊಡುಗೆ ನೀಡಿದ್ದಾರೆ ,ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸುವ ವಿಚಾರ ಅತ್ಯಂತ ಯೋಗ್ಯವಾಗಿದೆ ಎಂದ ಅವರು ಎಸ್ ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯವು ಡೀಮ್ಡ್ ಯೂನಿವರ್ಸಿಟಿ ಆಗಬೇಕು ಎಂದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ ಕರಿಸಿದ್ದಪ್ಪ ಪುಣೆಯ ಡಾ.ರಾಜೇಂದ್ರ ಹಿರೇಮಠ ಅವರುಗಳು ಮಾತನಾಡಿ ಎಸ್ ಜಿ ಬಾಳೇಕುಂದ್ರಿ ಇವರ ಕೊಡುಗೆಯನ್ನು ಕೊಂಡಾಡಿದರು .ಎಸ್ ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷೆ ಡಾ ಎಫ್ ವಿ ಮಾನ್ವಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು .ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೀಠಾಧಿಪತಿ ಡಾ. ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು .ಪ್ರೊಫೆಸರ್ ಶರಣಪ್ಪನವರ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.

ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button