Kannada NewsKarnataka NewsLatest
ತಂಬಾಕು ವ್ಯಾಪಾರಸ್ಥರ ಸಮಸ್ಯೆ ಸಿಎಂ ಗಮನಕ್ಕೆ ತಂದ ಜೊಲ್ಲೆ

ನಿಯೋಗದೊಂದಿಗೆ ಬೊಮ್ಮಾಯಿ ಭೇಟಿ ಮಾಡಿದ ಜೊಲ್ಲೆ ದಂಪತಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ನಿಪ್ಪಾಣಿ ಮತಕ್ಷೇತ್ರದ ತಂಬಾಕು ವ್ಯಾಪಾರಸ್ಥರು ಎದುರಿಸುತ್ತಿರುವ ಜಿಎಸ್ ಟಿ ಸಮಸ್ಯೆ ಕುರಿತು ಸೋಮವಾರ ಬೆಂಗಳೂರಿನಲ್ಲಿ ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದರು.
ನಿಯೋಗದೊಂದಿಗೆ ಬೊಮ್ಮಾಯಿ ಭೇಟಿ ಮಾಡಿದ ಜೊಲ್ಲೆ, ತಂಬಾಕು ವ್ಯಾಪಾರಸ್ಥರು ಎದುರಿಸುತ್ತಿರುವ ಜಿಎಸ್ ಟಿ ಸಮಸ್ಯೆ ಕುರಿತು ವಿವರಿಸಿ, ಸಮಸ್ಯೆ ಬಗೆಹರಿಸಲು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಚಂದ್ರಕಾಂತ ಕೋಟಿವಾಲೆ, ಮಹಾಲಿಂಗ ಕೋಟಿವಾಲೆ, ವಿಜೇಶಹಾ ಗಣೇಶ ಗಾಂಧಿ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.
ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮದ ಎಚ್ಚರಿಕೆ ನೀಡಿದ ಅಣ್ಣಾಸಾಹೇಬ ಜೊಲ್ಲೆ



