Belagavi NewsBelgaum NewsKannada NewsKarnataka News

*ನಾಳೆ ಬೆಳಗಾವಿ ನಗರದಲ್ಲಿ ಮದ್ಯ ಮಾರಾಟ ನಿಷೇಧ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹೀತದೃಷ್ಟಿಯಿಂದ ಬೆಳಗಾವಿ ನಗರ ಮತ್ತು ಬೆಳಗಾವಿ ತಾಲೂಕಿನಾದ್ಯಂತ ಶನಿವಾರ (ಜು.5) ಮದ್ಯ ಮಾರಾಟವನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಗುಲಾಬರಾವ ಬೊರಸೆ ಆದೇಶ ಹೊರಡಿಸುತ್ತಾರೆ.

ಬೆಳಗಾವಿ ನಗರದಲ್ಲಿ ಮೊಹರಂ ಹಬ್ಬದ ಕೊನೆಯ ದಿನದ ಮೆರವಣಿಗೆ ನಡೆಯಲಿರುವುದರಿಂದ, ಮೊಹರಂ ಹಬ್ಬದ ಮೆರವಣಿಗೆ ಕಾಲದಲ್ಲಿ ಯಾವುದೇ ಅಹೀತಕರ ಘಟನೆಗಳು ನಡೆಯದಂತೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಶನಿವಾರ ಜು.05 ರಂದು 6 ಸಂಜೆ ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟದ ಅಂಗಡಿಗಳು, ಬಾರ್/ರೆಸ್ಟೋರೆಂಟ್‌ಗಳು, ಕ್ಲಬ್‌ಗಳು ಹಾಗೂ ದಾಸ್ತಾನು ಡಿಪೋಗಳಿಂದ ಸರಬರಾಜನ್ನು ಬಂದ್ ಇಡುವಂತೆ ಸೂಚಿಸಲಾಗಿದೆ.

ಒಂದುವೇಳೆ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತರಾದ ಭೂಷಣ್ ಗುಲಾಬರಾವ ಬೊರಸೆ ಆದೇಶದಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button