*ಮತ್ತೆ ಒಂದಾಗುವುದಾಗಿ ಸ್ಪಷ್ಟಪಡಿಸಿದ ಅಜಯ್ ರಾವ್ ಪತ್ನಿ ಸ್ವಪ್ನಾ*

ಪ್ರಗತಿವಾಹಿನಿ ಸುದ್ದಿ: ಖ್ಯಾತ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಸುದ್ದಿ ಅಭಿಮಾನಿಗಳಲ್ಲಿ ಸಾಕಷ್ಟು ನೋವು ತಂದಿತ್ತು. ಇದೀಗ ಮತ್ತೆ ಒಂದಾಗುತ್ತಿರುವುದಾಗಿ ಸ್ಬತಃ ಅಜಯ್ ರಾವ್ ಪತ್ನಿ ಸ್ವಪ್ನಾ ಸ್ಪಷ್ಟಪಡಿಸಿದ್ದು, ಅಭಿಮಾನಿಗಳಲ್ಲಿ ಸಂತಸ ತಂದಿದೆ.
ನಿನ್ನೆಯಷ್ಟೇ ಅಜಯ್ ರಾವ್ ಪತ್ನಿ ಸ್ವಪ್ನಾ, ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು ಅಲ್ಲದೇ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸ್ ಕೂಡ ದಾಖಲಿಸಿದ್ದರು ಎಂಬ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಸ್ವಪ್ನಾ ಅಜಯ್ ರಾವ್, ತಾವು ಮತ್ತೆ ಒಂದಾಗುತ್ತಿರುವುದಾಗಿ ಹೊಂದಾಣಿಕೆಯಿಂದ ಜೀವನ ನಡೆಸುವುದಾಗಿ ತಿಳಿಸಿದ್ದಾರೆ.
ತಾಯಿಯಾಗಿ ನನ್ನ ಮೊದಲ ಜವಾಬ್ದಾರಿ ನನ್ನ ಮಗಳ ಸುರಕ್ಷತೆ. ಗೌರವ ಮತ್ತು ಅವಳ ಭವಿಷ್ಯಕ್ಕಾಗಿ ನಾನು ಪ್ರತಿದಿನ ಧೈರ್ಯವನ್ನು ಕೂಡಿಸಿ, ನನಗೆ ತೀವ್ರವಾಗಿ ಪರೀಕ್ಷಿಸುವ ಸವಾಲುಗಳನ್ನು ಎದುರಿಸುತ್ತಿದ್ದೇನೆ.
ಪ್ರಿಯ ಸ್ನೇಹಿತರೇ ಹಾಗೂ ಸಹೋದರರೇ, ಈ ಹಂತದಲ್ಲಿ ನಾನು ಮತ್ತು ನನ್ನ ಮಗಳು ನಮ್ಮ ಬದುಕನ್ನು ಪುನರ್ ನಿರ್ಮಿಸಿಕೊಳ್ಳಲು ಮತ್ತು ನಮ್ಮ ದಾಂಪತ್ಯ ಜೀವನವನ್ನು ಪುನಃ ಸ್ಥಾಪಿಸಲು ನಿಮ್ಮ ಹಾರೈಕೆಗಳು ಹಾಗೂ ಪ್ರಾರ್ಥನೆಗಳನ್ನು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ.
ನಾನು ಅತ್ಯಂತ ಗೌರವದಿಂದ ತಿಳಿಸಲು ಬಯಸುವುದೇನಂದರೆ ಈ ವಿಷಯವು ನಮ್ಮ ವೈಯಕ್ತಿಕ, ಆಳವಾದ ಭಾವನಾತ್ಮಕ ಮತ್ತು ದಾಂಪತ್ಯ ಜೀವನಕ್ಕೆ ಮಾತ್ರ ಸಂಬಂಧಿಸಿದ್ದು ಹೊರತು ಬೇರೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ತಿಳಿಸಲು ಬಯಸುತ್ತೇನೆ. ಕೃತಜ್ಞತೆಗಳೊಂದಿಗೆ ಸ್ವಪ್ನಾ ಅಜಯ್ ರಾವ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.