Latest

ತನಗೂ ಡ್ರಗ್ಸ್ ಜಾಲದ ನಂಟಿದೆ ಎಂದು ಶರಣಾದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬ ತನಗೆ ಡ್ರಗ್ಸ್ ಮಾಫಿಯಾ ಜತೆ ಲಿಂಕ್ ಇದೆ ಎಂದು ತಾನಾಗಿಯೇ ಸಿಸಿಬಿ ಮುಂದೆ ಶರಣಾಗಿರುವ ಘಟನೆ ನಡೆದಿದೆ.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬೈಕ್ ನಲ್ಲಿ ಬಂದಿರುವ ಅನಿರುದ್ಧ ಎಂಬ ವ್ಯಕ್ತಿ, ತನಗೆ ಡ್ರಗ್ಸ್ ಜಾಲದ ಜತೆ ನಂಟಿದೆ. ತನ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವಂತೆ ಶರಣಾಗಿದ್ದಾನೆ.

ತಾನು ಡ್ರಗ್ಸ್ ಜಾಲದ 13ನೇ ಆರೋಪಿಯಾಗಿದ್ದು, ನಟಿ ರಾಗಿಣಿ ದ್ವಿವೇದಿ ಜತೆಗೆ ಇದ್ದಿದ್ದು ತಾನೇ ಎಂದು ಹೇಳಿದ್ದಾನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button