Karnataka News

*ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಚಾಲನೆ: ದೊಡ್ಡಗಣಪತಿ ದರ್ಶನ ಪಡೆದು ಇತಿಹಾಸ ವಿವರಿಸಿದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ.

ಇಂದಿನಿಂದ ಒಂದು ವಾರಗಳ ಕಾಲ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಹಾಗೂ ಜಾತ್ರೆ ನಡೆಯಲಿದೆ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.

Home add -Advt

ಬೆಂಗಳೂರಿನ ‌ಪ್ರಖ್ಯಾತ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಚಾಲನೆ ನೀಡಿ, ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ನೆರವೇರಿಸಿದ್ದೇನೆ.‌ ಹಾಗೆಯೇ ದೊಡ್ಡಗಣಪತಿಯ ದರ್ಶನ ಪಡೆದೆ ಎಂದು ತಿಳಿಸಿದ್ದಾರೆ.

ಬಸವನಗುಡಿಯ ಕಡಲೆಕಾಯಿ ಪರಿಷೆಯ ಇತಿಹಾಸವು ಆಸಕ್ತಿಕರ ಕಥೆಯಗಳ ಜೊತೆ ಬೆಸೆದುಕೊಂಡಿದೆ. ಬಸವನಗುಡಿ ಸುತ್ತಮುತ್ತಲಿನ ಪ್ರದೇಶವು ‌ಈ‌ ಹಿಂದೆ ಕಡಲೆಕಾಯಿ ಹೊಲಗಳಾಗಿತ್ತು. ರೈತರು ಬೆಳೆದ ಕಡಲೆಕಾಯನ್ನು ಬಸವಣ್ಣ ತಿಂದು ಖಾಲಿ ಮಾಡ್ತಿದ್ನಂತೆ. ಇದರಿಂದ ಬೇಸತ್ತ ರೈತರು ಕೊನೆಗೆ ದೊಡ್ಡ ಬಸವಣ್ಣನ ಮೂರ್ತಿಗೆ ಕಡಲೆಕಾಯಿ ಅಭಿಷೇಕ ಮಾಡುವುದಾಗಿ ಹರಕೆ ಕಟ್ಟಿಕೊಂಡರಂತೆ. ಅಲ್ಲಿಂದೀಚೆಗೆ ಕಡಲೆಕಾಯಿ ಪರಷೆ ನಡೆದುಕೊಂಡು ಬಂದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

Related Articles

Back to top button