Karnataka News

*ಶಾಲಾ ಬಸ್ ಗೆ 5 ವರ್ಷದ ಬಾಲಕ ಬಲಿ*

ಪ್ರಗತಿವಾಹಿನಿ ಸುದ್ದಿ: ಖಾಸಗಿ ಶಾಲೆಯ ಬಸ್ ಹರಿದು 5 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ನಿಡಗುಂದಿ ತಾಲೂಕಿನ ಅರಳದಿನ್ನಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. 5 ವರ್ಷದ ಬಾಲಕ ಬಸವರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬಾಲಕ ಬಸವರಾಜ್ ಅಂಗನವಾಡಿಗೆ ಹೋಗಲೆಂದು ಮನೆಯಿಂದ ಬರುತ್ತಿದ್ದ ಈ ವೇಳೆ ರಸ್ತೆ ದಾಟಲು ಮುಂದಾಗಿದ್ದ ವೇಳೆ ವೇಗವಾಗಿ ಬಂದ್ ಖಾಸಗಿ ಶಾಲಾ ಬಸ್ ಬಾಲಕನ ಮೇಲೆ ಹರಿದು ಹೋಗಿದೆ. ಸ್ಥಳದಲ್ಲೇ ಬಾಲಕ ಬಸವರಾಜ್ ಉಸಿರುಚೆಲ್ಲಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.

Home add -Advt

Related Articles

Back to top button