Kannada NewsLatest

ವಿದ್ಯಾರ್ಥಿಗಳು ಪ್ರತಿಭೆ ತೋರಿಸಲು ಕ್ರೀಡಾಕೂಟಗಳು ಸಹಕಾರಿ: ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರಿಸಲು ವಲಯ  ಕ್ರೀಡಾಕೂಟ ಸಹಕಾರಿಯಾಗಲಿದ್ದು, ವಲಯ ಮಟ್ಟದಲ್ಲಿ  ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೂ ತಮ್ಮ ಕ್ರೀಡಾ ಪ್ರತಿಭೆ ಮೆರೆಯಬಹುದು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಅವರು  ರಣಕುಂಡೆ ಗ್ರಾಮದಲ್ಲಿ ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟ  ಉದ್ಘಾಟಿಸಿ, ಮಾತನಾಡಿದರು.

ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಉತ್ತಮ ಪ್ರದರ್ಶನ ನೀಡುವಂತೆ ಅವರು ಪ್ರೋತ್ಸಾಹಿಸಿದರು.

Home add -Advt

ಈ ಸಂದರ್ಭದಲ್ಲಿ ಭರಮಾಣಿ ಪಾಟೀಲ, ಗವಸಾಬಿ ತಾಶಿಲ್ದಾರ್, ಸುಲೋಚನಾ ಕೋಲಕಾರ, ರಾಮನಿಂಗ ಮೊರೆ, ಸಖು ಭೈರು ಪಾಟೀಲ, ಮುರಾರಿ ಪಾಟೀಲ, ವಿಠ್ಠಲ ಪಾಟೀಲ, ಬಿಇಒ ಆರ್. ಪಿ. ಜುಟ್ಟನವರ, ಶ್ಯಾಮ್ ಖಿರೋಜಿ ಹಾಗೂ ವಿವಿಧ ಪ್ರೌಢ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಚಿಕ್ಕೋಡಿ : 18.30 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ ವಶ; ಆರೋಪಿ ಬಂಧನ

Related Articles

Back to top button