Kannada News

ಕ್ರೂಜರ್, ದ್ವಿಚಕ್ರ ವಾಹನಗಳ ಮಧ್ಯೆ ಸರಣಿ ಅಪಘಾತ; ಇಬ್ಬರು ಯುವಕರ ಸಾವು

ಪ್ರಗತಿವಾಹಿನಿ ಸುದ್ದಿ, ರಾಮದುರ್ಗ: ತಾಲೂಕಿನ ಕಡ್ಲಿಕೊಪ್ಪ ಗ್ರಾಮದ ಬಳಿ ಕ್ರೂಜರ್ ಹಾಗೂ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಭಾಗ್ಯ ನಗರದ ಮಾಲಿಂಗ ನಂದಪ್ಪ ಆಚಮಟ್ಟಿ (25) ಹಾಗೂ ಬಸವನ ಬಾಗೇವಾಡಿಯ ರಫಿಕ್ ಚಲವಾದಿ (20) ಮೃತ ಪಟ್ಟವರು.

ಗಂಭೀರ ಗಾಯಗೊಂಡಿರುವ ಆಶ್ರಯ ಪ್ಲಾಟ್ ನಿವಾಸಿ ಯುನೂಸ್ ಮಹ್ಮದ್‌ ಪಟೇಲ್ (25) ಅವರನ್ನು ಬಾಗಲಕೋಟೆ ಆಸ್ಪತ್ರೆಗೆ ಸಾಗಿಸಿದ್ದು, ಭಾಗ್ಯ ನಗರದ ಮಾರುತಿ ಬಂಡಿವಡ್ಡರ (20) ಅವರನ್ನು ರಾಮದುರ್ಗ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದ್ವಿಚಕ್ರ ವಾಹನಗಳಲ್ಲಿ ಬರುತ್ತಿದ್ದ ನಾಲ್ವರೂ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಕೆಲಸ ಮುಗಿಸಿ ರಾಮದುರ್ಗದತ್ತ ಬರುತ್ತಿದ್ದ ವೇಳೆ ರಾಮದುರ್ಗದಿಂದ ಶಿರಸಂಗಿ ಕಡೆಗೆ ಹೊರಟಿದ ಕ್ರೂಜರ್ ಡಿಕ್ಕಿ ಹೊಡೆಯಿತು.

Home add -Advt

ಈ ಕುರಿತು ರಾಮದುರ್ಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಲಪ್ರಭಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲು

https://pragati.taskdun.com/a-young-man-drowned-who-went-swimming-in-the-malaprabha-river/

*ಜೈನ್ ಕಾಲೇಜಿನ 7 ವಿದ್ಯಾರ್ಥಿಗಳ ಬಂಧನ*

https://pragati.taskdun.com/jain-univercity7-studentsarrested/

ಮಾರ್ಚ್ ನಲ್ಲಿ ಸಿದ್ಧಗೊಳ್ಳಲಿವೆ ದೇಶದ ಮೊದಲ 22 ಸ್ಮಾರ್ಟ್ ಸಿಟಿಗಳು

https://pragati.taskdun.com/the-countrys-first-22-smart-cities-will-be-ready-in-march/

Related Articles

Back to top button