Kannada NewsKarnataka News

*ಕಕ್ಷಿದಾರ ಮಹಿಳೆಗೆ ಲೈಂಗಿಕ ಕಿರುಕುಳ: ಸರ್ಕಾರಿ ಪ್ರಾಸಿಕ್ಯೂಟರ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮಹಿಳೆಗೆ ನ್ಯಾಯ ಕೊಡಿಸಬೇಕಿದ್ದ ಸರ್ಕಾರದಿಂದ ನೇಮಕಗೊಂಡ ಪಬ್ಲಿಕ್ ಪ್ರಾಸಿಕ್ಯೂಟರ್ ಅದೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಕಾಟನ್ ಪೇಟೆ ಪೊಲೀಸರು ಆರೋಪಿ ಶ್ರೀರಾಮ್‌ ಎಂಬ ಪಬ್ಲಿಕ್ ಪ್ರಾಸಿಕ್ಯೂಟರ್ ನನ್ನು ಬಂಧಿಸಿದ್ದಾರೆ. ಮಹಿಳೆ ನೀಡಿದ್ದ ಹಳೆಯ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು. ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲು, ಮಹಿಳೆ ಪಬ್ಲಿಕ್ ಪ್ರಾಸಿಕ್ಯೂಟರ್ ಬಳಿ ಹೋಗಿ ಕೇಸಿನ ಆದೇಶ ಪ್ರತಿ ಕೇಳಿದ್ದಾಳೆ. ಆಗ ಆದೇಶ ಪ್ರತಿ ಕೊಡುವುದಾಗಿ ಪ್ರಾಸಿಕ್ಯೂಟರ್ ಶ್ರೀರಾಮ್ ಲೈಂಗಿಕವಾಗಿ ಸಹಕರಿಸಲು ಕೋರಿದ್ದಾನೆ. ಈ ವೇಳೆ ಪ್ರಾಸಿಕ್ಯೂಟರ್ ವರ್ತನೆ ಪ್ರತಿರೋಧ ವ್ಯಕ್ತಪಡಿಸಿದ ಮಹಿಳೆ ಕೂಡಲೆ ಗಂಡನಿಗೆ ಕರೆ ಮಾಡಿ ಪ್ರಾಸಿಕ್ಯೂಟರ್ ಅಸಭ್ಯ ವರ್ತನೆ ಬಗ್ಗೆ ತಿಳಿಸಿದ್ದಾರೆ.

ಮಹಿಳೆಯ ಗಂಡ ದೂರವಿದ್ದ ಕಾರಣ, ಗಂಡನ ಸ್ನೇಹಿತ ತಕ್ಷಣವೇ ಮಹಿಳೆಯಿದ್ದ ಸ್ಥಳಕ್ಕೆ ತೆರಳಿ ಮಹಿಳೆಯ ರಕ್ಷಣೆ ಮಾಡಿದ್ದಾರೆ. ಮಹಿಳೆ ಲೈಂಗಿಕವಾಗಿ ಕಿರುಕುಳ ನೀಡಿದ ದೂರು ನೀಡಿದ ಹಿನ್ನೆಲೆಯಲ್ಲಿ ಕಾಟನ್‌ಪೇಟೆ ಪೊಲೀಸರು ಆರೋಪಿ ಶ್ರೀರಾಮ್‌ನನ್ನು ಬಂಧಿಸಿ ಕೋರ್ಟ್ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿ ಶ್ರೀರಾಮ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.

Home add -Advt

Related Articles

Back to top button