Kannada NewsKarnataka NewsLatest
*ಚಮತ್ಕಾರಿ ಪಾತ್ರೆ ಎಂದು ನಂಬಿಸಿ ಉದ್ಯಮಿಗೆ ವಂಚನೆ *

ಪ್ರಗತಿವಾಹಿನಿ ಸುದ್ದಿ: ಚಮತ್ಕಾರಿ ಪಾತ್ರೆ ಎಂದು ನಂಬಿಸಿ ಉದ್ಯಮಿಗೆ ವಂಚಿಸದ ಗ್ಯಾಂಗ್ ನ ಮೂವರನ್ನು ಬೆಂಗಳೂರಿನ ಜನಯನಗರ ಪೊಲೀಸರು ಬಂಧಿಸಿದ್ದಾರೆ.
ಚಮತ್ಕಾರಿ ಪಾತ್ರೆ ಎಂದು ನಂಬಿಸಿ ಕೋಟಿ ಕೋಟಿ ವಂಚನೆಗೆ ಯತ್ನಿಸಿದ ಶಿವಶಂಕರ್, ಅಬ್ದುಲ್ ಸುಕ್ಕುರ್ ಹಾಗೂ ಸನ್ನಿ ಗಿಲ್ ಎಂಬುವರನ್ನು ಬಂಧಿಸಿದ ಪೊಲೀಸರು, ಬಂಧಿತ ಆರೋಪಿಗಳಿಂದ 70ಲಕ್ಷ ಹಣ ಮತ್ತು ಒಂದು ಪಾತ್ರೆ ವಶಕ್ಕೆ ಪಡೆದಿದ್ದಾರೆ.
ಉದ್ಯಮಿಯೊಬ್ಬರಿಗೆ ಪಾತ್ರೆ ತೋರಿಸಿ ವಂಚಿಸಿದ್ದ ಗ್ಯಾಂಗ್ ಇದು ಆಪಾರ ಶಕ್ತಿಯನ್ನು ಹೊಂದಿರುವ ಅದೃಷ್ಟದ ಪಾತ್ರೆ ಎಂದು ನಂಬಿಸಿದ್ದಾರೆ, ಮಾರ್ಕೆಟ್ ನಲ್ಲಿ ಈ ಪಾತ್ರೆಗೆ ಕೋಟ್ಯಾಂತರ ರೂ ಬೆಲೆ ಇದೆ. ಒಂದುವರೆ ಕೋಟಿ ಹಣ ನೀಡಿದರೆ ತಮಗೆ ಈ ಅದೃಷ್ಟದಪಾತ್ರೆ ಕೊಡೋದಾಗಿ ಹೇಳಿದ್ದ ಗ್ಯಾಂಗ್, ಕೊನೆಗೆ 70 ಲಕ್ಷಕ್ಕೆ ಡೀಲ್ ಕುದುರಿಸಿದೆ. ಈ ವಿಷಯ ತಿಳಿದ ಹಿನ್ನಲೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.




