Belagavi NewsBelgaum NewsElection NewsPolitics

*ಯಕ್ಸಂಬಾ ಪಟ್ಟಣದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಭರ್ಜರಿ ಪ್ರಚಾರ*

ಪ್ರಗತಿವಾಹಿನಿ ಸುದ್ದಿ: ಮೇ 07 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಅವರ ಪರವಾಗಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಯಕ್ಸಂಬಾ ಪಟ್ಟಣದಲ್ಲಿ ಬೂತ ಮಟ್ಟದ ಸಭೆ ನಡೆಸಿ ಮಾತನಾಡಿದರು.

ಬಳಿಕ ಶಶಿಕಲಾ ಜೊಲ್ಲೆ ಮಾತನಾಡಿ ಕ್ಷೇತ್ರದ ಪ್ರತಿ ವ್ಯಕ್ತಿಯೂ ಸರ್ಕಾರದ ಯಾವುದೇ ಯೋಜನೆಗಳಿಂದ ವಂಚಿತರಾಗಬಾರದು ಸಮಾಜದ ಅಭಿವೃದ್ಧಿಯೇ ಸಂಸದರ ಮುಖ್ಯ ಧ್ಯೇಯವಾಗಿದ್ದು ಕಳೆದ 5 ವರ್ಷದ ಅವಧಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ.ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಶ್ರೀ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಗುರಿಯಾಗಲಿ ನೀವು ಹಾಗೂ ನಿಮ್ಮ ಸುತ್ತಲಿನ ಎಲ್ಲ ಜನತೆಗೆ ಬಿಜೆಪಿ ಸಾಧನೆಗಳನ್ನು ತಿಳಿಸಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸುವತ್ತ ಕೆಲಸ ಮಾಡೋಣವೆಂದು ಹೇಳಿದರು.

ಈ ಸಂದರ್ಭದಲ್ಲಿ ಆಶಿಷ ಹುಕ್ಕೇರಿ ಶಿವಲಿಂಗ ಬಾಳು ಐನಾಪೂರೆ,ಕಾಶಿಬಾಯಿ ಬಾಳು ಸಾತ್ವರ ಬಾಲಚಂದ್ರ ಸಾತ್ವರ ಬೈರು ಬಾಬು ಸಾತ್ವರ ಅನಿಲ ಸಾತ್ವರ ಶಂಕರ ಜೊಲ್ಲೆ ಧನಪಾಲ ಮಾಳಿ ಬೂತ ಅಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button